ಇತರೆ

ಕುಂದಾಪುರ: ವಕೀಲರಿಗೆ ಲೈಂಗಿಕ ಕಿರುಕುಳದ ಬೆದರಿಕೆ ಆರೋಪ, ಪ್ರಕರಣ ದಾಖಲು

Views: 162

ಕುಂದಾಪುರ: ಲೈಂಗಿಕ ದೌರ್ಜನ್ಯದ ಬಿದರಿಕೆ ಹಾಕಿ ಹಣ ವಸೂಲಿ ಮಾಡಿಕೊಂಡು ಹೋಗಿರುವ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಯುವ ವಕೀಲ ನೀಲ್ ಬ್ರಾಯನ್ ಪಿರೇರಾ ಅವರು ಪ್ರಕರಣ ದಾಖಲಿಸಿದ್ದಾರೆ.

ವಡ್ಡರ್ಸೆ ದೇವೇಂದ್ರ ಸುವರ್ಣ ಮತ್ತು ಮುಖಾಂಬು ಪ್ರಕರಣದ ಆರೋಪಿಗಳು

ಕೋಟದಲ್ಲಿ ಶ್ಯಾಮಸುಂದರ ನಾಯರಿ ಅವರ ಬಳಿ ಸಹಾಯಕ ವಕೀಲನಾಗಿ ಕೆಲಸ ಮಾಡಿಕೊಂಡಿರುವ ನೀಲ್‌ ಪಿರೇರ ಅವರಲ್ಲಿ 2023ರಲ್ಲಿ ದೇವೆಂದ್ರ ಸುವರ್ಣ ಎನ್ನುವವರು ಮೂಕಾಂಬಿಕ ಎನ್ನುವ ಮಹಿಳೆಯನ್ನು ಕಚೇರಿಗೆ ಕರೆದುಕೊಂಡು ಒಂದು ಕೇಸಿನ ಬಗ್ಗೆ, ಮಾತನಾಡಿಕೊಂಡು ಹೋಗಿದ್ದರು. ಆದೇ ಕೇಸಿನ ವಿಚಾರವಾಗಿ ಮಾತನಾಡಲು ಮೂಕಾಂಬಿಕಾ ಪಿರೇರಾ ಅವರ ಮೊಬೈಲ್ ನಂಬರ್ ನ್ನು ತೆಗೆದುಕೊಂಡಿದ್ದರು.

ಕೆಲವು ದಿನಗಳ ನಂತರ ದೇವೆಂದ್ರ ಸುವರ್ಣ ಮೂಕಾಂಬಿಕ ಅವರೊಂದಿಗೆ ಕಚೇರಿಗೆ ಬಂದು ರೂ.50ಸಾವಿರ ಹಣವನ್ನು ನೀಡಬೇಕು. ನೀಡದಿದ್ದಲ್ಲಿ ತಂತ್ರಜ್ಞಾನ ಬಳಸಿ ನೀನು ಮೂಕಾಂಬಿಕ ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದೀಯಾ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದೀಯಾ ಎಂದು ಸುಳ್ಳು ಪ್ರಕರಣವನ್ನು ದಾಖಲಿಸಿ ನಿನ್ನ ಮಾನ ಮರ್ಯಾದೆ ತೆಗೆಯುತ್ತೇನೆ” ಎಂದು ಹೆದರಿಸಿದ್ದರು.ವಕೀಲರನ್ನು ಪದೇಪದೇ  ಬೆದರಿಸಿ ರೂ.18ಸಾವಿರ ವಸೂಲಿ ಮಾಡಿರುತ್ತಾರೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ನೀಲ್‌ ಪಿರೆರಾ ಅವರು ಲೈಂಗಿಕ ದೌರ್ಜನ್ಯ ಬೆದರಿಕೆ ಮತ್ತು ಸುಲಿಗೆ ಪ್ರಕರಣ ದಾಖಲಿಸಿದ್ದಾರೆ.

Related Articles

Back to top button