ಇತರೆ
ಕುಂದಾಪುರ: ಮೊಳಹಳ್ಳಿಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು, ಪೊಲೀಸರಿಂದ ದಾಳಿ

Views: 350
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಮಾಸ್ತಿಕಟ್ಟೆ ಎಂಬಲ್ಲಿರುವ ಉದಯ ಎಂಬುವವರ ಮನೆಯ ಬಳಿ ಇರುವ ಗೋಡೌನ್ ನಲ್ಲಿ ಅಕ್ಕಿ ದಾಸ್ತಾನು ಮಾಡಲಾಗಿದೆ ಎಂಬ ದೂರಿನಂತೆ ಕೋಟ ಪೊಲೀಸರು ದಾಳಿ ಮಾಡಿ ಅಕ್ರಮವಾಗಿ ದಾಸ್ತಾನು ಮಾಡಿದ ಅಕ್ಕಿಯನ್ನು ವಶಪಡಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಉದಯ ಎಂಬುವವರ ಮನೆಯ ಬಳಿ ಇರುವ ಗೋಡೌನ್ ನಲ್ಲಿ ಅನ್ನ ಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕಾನೂನು ಬಾಹಿರವಾಗಿ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕೋಟ ಪೊಲೀಸ್ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಗೋಡೌನೊಳಗೆ ಬಿಳಿ ಪಾಲಿಥೀನ್ ಚೀಲದಲ್ಲಿ ಅಕ್ಕಿಯನ್ನು ತುಂಬಿದ್ದು ಕಂಡು ಬಂದಿದ್ದು ಸರಕಾರದಿಂದ ನೀಡುವ ಉಚಿತ ಪಡಿತರ ಅಕ್ಕಿಯಾಗಿದ್ದು ಅಕ್ರಮವಾಗಿ ದಾಸ್ತಾನು ಇರಿಸಿದ ಅಕ್ಕಿಯೆಂದು ದೃಢಪಟ್ಟಿರುವುದರಿಂದ ಒಟ್ಟು 8 ಕ್ವಿಂಟಾಲ್ 45 ಕೆ ಜಿ ಸಂಗ್ರಹಿಸಿ ಇಡಲಾದ ಅಕ್ಕಿ ಮತ್ತು ತೂಕ ಮಾಡುವ ಮಾಪನ -1 ಸ್ವಾಧೀನಪಡಿಸಿಕೊಂಡಿರುವುದಾಗಿದೆ.






