ಇತರೆ

ಕುಂದಾಪುರ: ಭಾರೀ ಗಾಳಿ ಮಳೆಗೆ ಕಟ್ಕೆರೆಯಲ್ಲಿ ರಸ್ತೆಗೆ ಬಿದ್ದ ಮರ: ಮರದ ಅಡಿಗೆ ಸಿಲುಕಿದ ಪಿಕಪ್ ವ್ಯಾನ್ ಚಾಲಕ ಗಂಭೀರ

Views: 653

ಕನ್ನಡ ಕರಾವಳಿ ಸುದ್ದಿ: ಹಾಲಾಡಿ ಮತ್ತು ಕೋಟೇಶ್ವರ ರಸ್ತೆಯ ಕಟ್ಕೆರೆ ಎಂಬಲ್ಲಿ ಭಾರೀ  ಗಾಳಿ ಮಳೆಯಿಂದಾಗಿ ರಸ್ತೆಗೆ ಉರುಳಿದ ಮರದಡಿ ಪಿಕಪ್ ವ್ಯಾನ್ ಸಿಲುಕಿಕೊಂಡು ಚಾಲಕ ಹರೀಶ್ ಆನಗಳ್ಳಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗುರುವಾರ ಬೆಳಿಗ್ಗೆ 4 ಗಂಟೆಯ ಹೊತ್ತಿಗೆ ಇಲ್ಲಿನ ನಿವಾಸಿ ಹರೀಶ್ ಆನಗಳ್ಳಿ ಎಂಬುವರು ಎಂದಿನಂತೆ ಪಿಕಪ್ ವ್ಯಾನ್ ಚಲಾಯಿಸಿಕೊಂಡು ಈ ಮಾರ್ಗದಲ್ಲಿ ಹೋಗುತ್ತಿರುವಾಗ ಕಟ್ಕೆರೆ ಎಂಬಲ್ಲಿ ದೊಡ್ಡ ಮರವೊಂದು ಬೀಳುತ್ತಿರುವಾಗಲೇ ಪಿಕಪ್ ವಾಹನ ಸಿಲುಕಿಕೊಂಡಿದೆ. ವಾಹನದೊಳಗೆ ಸಿಲುಕಿಕೊಂಡಿರುವ ಚಾಲಕನನ್ನು ಸ್ಥಳೀಯರು ಹರಸಾಹಸಪಟ್ಟು ಹೊರ ತೆಗೆದಿದ್ದಾರೆ. ಗಂಭೀರ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಮಾರ್ಗ ಸಂಪೂರ್ಣ ಬಂದಾಗಿದ್ದು ವಾಹನಗಳು ಗುರುಕುಲ ಮಾರ್ಗದಲ್ಲಿ ಸಂಚರಿಸುತ್ತಿವೆ

Related Articles

Back to top button
error: Content is protected !!