ಇತರೆ
ಕುಂದಾಪುರ: ಬಸ್ರೂರಿನಲ್ಲಿ ಮುನ್ನೆಚ್ಚರಿಕೆ ನೀಡದೆ ಬಂಡೆ ಸ್ಪೋಟ ಪಕ್ಕದ ಎರಡು ಮನೆಗಳಿಗೆ ಹಾನಿ

Views: 133
ಕುಂದಾಪುರ: ಪಕ್ಕದ ಮನೆಯವರು ತೋಟದ ಕಾಮಗಾರಿ ನಡೆಸುತ್ತಿದ್ದಾಗ ಅನಧಿಕೃತವಾಗಿ ಸ್ಫೋಟಗೊಂಡು ಎರಡು ಮನೆಗಳಿಗೆ ಹಾನಿಯಾಗಿದೆ ಎಂದು ಬಸ್ರೂರಿನ ಶಶಿಕಾಂತ್ ಮತ್ತು ಆನಂದ ದೂರು ನೀಡಿದ್ದಾರೆ.
ಅವರು ಮನೆಯ 100 ಮೀಟರ್ ಗಿಂತಲೂ ಕಡಿಮೆ ಅಂತರದಲ್ಲಿ ಸೂರ್ಯನಾರಾಯಣ ಅವರ ಮನೆ ಹಾಗೂ ತೋಟವಿದ್ದು ಅಲ್ಲಿ ಕಾಮಗಾರಿಕೆ ನಡೆಯುತ್ತಿದೆ ಈ ಸಂದರ್ಭ ಜೋರಾಗಿ ಸ್ಪೋಟ ಸಂಭವಿಸಿದ್ದು ನಮ್ಮ ಹಾಗೂ ನೆರೆಮನೆಯ ಆನಂದ ಅವರ ಮನೆಯ ಗೋಡೆ ಬಿರುಕು ಬಿಟ್ಟಿದೆ ಎಂದು ತಿಳಿಸಿದ್ದಾರೆ.
ಸೂರ್ಯನಾರಾಯಣ ಅವರು 20 ಅಡಿ ಆಳದಲ್ಲಿ ಮಣ್ಣು ತಗಿಸುತ್ತಿರುವಾಗ ಸಿಕ್ಕ ಬಂಡೆ ಕಲ್ಲುಗಳನ್ನು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಸ್ಪೋಟಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.