ಶಿಕ್ಷಣ
ಕುಂದಾಪುರ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಮಾಚಾರ್ ನಿಧನ

Views: 285
ಕುಂದಾಪುರ : ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ರಾಮಾಚಾರ್(84) ಅವರು ಮಾರ್ಚ್4 ರಂದು ಕುಂದಾಪುರದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಮತ್ತು ಪುತ್ರ ಕುಂದಾಪುರದ ಶ್ರೀ ದುರ್ಗಾ ಜುವೆಲರ್ಸ್ ಮಾಲಕ ರಾಜಶೇಖರ್ ಆಚಾರ್ಯ ಅವರನ್ನು ಅಗಲಿದ್ದಾರೆ.
ರಾಮಾಚಾರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾಗಿ ತೊಡಗಿಸಿಕೊಂಡು ಶಿಸ್ತಿನ ಸಿಪಾಯಿಯಾಗಿ ಹೆಸರು ಗಳಿಸಿದ್ದಾರೆ.ಅವರು ಮಾಳೂರು, ತೀರ್ಥಳ್ಳಿ, ಬಸ್ರೂರು ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಹಾಗೂ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.
ತಾಲೂಕು ವಿಶ್ವ ಬ್ರಾಹ್ಮಣ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ನಿವೃತ್ತಿಯ ನಂತರ ಕನ್ಯಾನ ಹಟ್ಟಿಯಂಗಡಿಯ ನಮ್ಮ ಭೂಮಿ ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹಾಗೂ ಇನ್ನಿತರ ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದರು. ಅವರ ನಿಧನಕ್ಕೆ ಶಿಕ್ಷಣಾಭಿಮಾನಿಗಳು ಅಂತಿಮ ನಮನ ಸಲ್ಲಿಸಿದ್ದಾರೆ.