ಇತರೆ
ಕುಂದಾಪುರ: ಉದ್ಯೋಗದ ಬಗ್ಗೆ ಹಣ ಹೂಡಿಕೆ ಹೆಸರಿನಲ್ಲಿ 8 ಲಕ್ಷ ರೂ. ವಾಟ್ಸಾಪ್ ಸಂದೇಶಕ್ಕೆ ವಂಚನೆಗೊಳಗಾದ ಯುವತಿ

Views: 97
ಕುಂದಾಪುರ: ಉದ್ಯೋಗದ ಬಗ್ಗೆ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ನೀಡುವುದಾಗಿ ನಂಬಿಸಿ ಯುವತಿಯೊಬ್ಬರಿಗೆ 8 ಲಕ್ಷ ರೂ. ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಷತಾ (26) ಎಂಬವರಿಗೆ ಜ.14ರಂದು ವಾಟ್ಸಾಪ್ ಸಂದೇಶ ಬಂದಿದ್ದು, ಅದರಲ್ಲಿ ಅಪರಿಚಿತ ವ್ಯಕ್ತಿಯು ಉದ್ಯೋಗದ ಬಗ್ಗೆ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭ ಬರುವುದಾಗಿ ತಿಳಿಸಿದ್ದನು. ಅದನ್ನು ನಂಬಿದ ಅಕ್ಷತಾ ಆ ವ್ಯಕ್ತಿಯು ತಿಳಿಸಿದ ಬ್ಯಾಂಕ್ ಖಾತೆಗೆ ಒಟ್ಟು 8 ಲಕ್ಷ ರೂ. ಆನ್‌ಲೈನ್ ಮುಖಾಂತರ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಗಳು ಅಕ್ಷತಾ ಅವರಿಗೆ ಲಾಭಾಂಶವನ್ನು ನೀಡದೇ, ಪಡೆದ ಹಣವನ್ನು ವಾಪಾಸು ನೀಡದೇ ವಂಚನೆ ಮಾಡಿರುವ ಪ್ರಕರಣ ದಾಖಲಾಗಿದೆ.