ಇತರೆ

ಕುಂದಾಪುರ: ಅಂದರ್ ಬಾಹರ್ ಜುಗಾರಿ ಅಡ್ಡೆಗೆ ದಾಳಿ, ಐವರು ಪೊಲೀಸ್ ವಶಕ್ಕೆ 

Views: 142

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಕಸಬಾ ಗ್ರಾಮದ ಮದ್ದುಗುಡ್ಡೆ ಪಂಚಗಂಗಾವಳಿ ಹೊಳೆಯ ಕುದ್ರುವಿನ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ವೇಳೆ ಪೊಲೀಸ್ ಉಪ ನಿರೀಕ್ಷಕ ನಂಜಾ ನಾಯ್ಕ್ ಅವರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ.

ದಯಾನಂದ, ಅಣ್ಣಯ್ಯ, ರವೀಂದ್ರ, ಮೊಮಿನ್ ಮೊಹಮ್ಮದ್ ಜಮೀಲ್, ಜಯರಾಮ್ ಆರೋಪಿಗಳಾಗಿದ್ದು, ಇವರಿಂದ ಆಟಕ್ಕೆ ಬಳಸಿದ ಪರಿಕರ ಹಾಗೂ 1620 ರೂ.ನಗದನ್ನು ವಶಕ್ಕೆ ಪಡೆದಿದ್ದಾರೆ. ನಾರಾಯಣ ಹಾಗೂ ಇನ್ನೂ ಕೆಲವರು ದಾಳಿಯ ವೇಳೆ ಪರಾರಿಯಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!