ಕುಂದಾಪುರದ ಅಂಕದಕಟ್ಟೆಯಲ್ಲಿ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನರು

Views: 223
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಅಂಕದಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರು ಭಯಭೀತರಾಗಿದ್ದಾರೆ.
ಇಲ್ಲಿನ ನಿವಾಸಿ ಡಾ. ಜಾನ್ಸನ್ ಅವರ ಮನೆ ಹಿಂಭಾಗದಲ್ಲಿ ಬುಧವಾರ ರಾತ್ರಿ 12.56ರ ವೇಳೆಗೆ ಚಿರತೆ ಓಡಾಟದ ದೃಶ್ಯ ಸ್ಥಳೀಯ ಸೆಕ್ಯೂರಿಟಿ ಸಂಸ್ಥೆಯ ಲೈವ್ ಮಾನಿಟರಿಂಗ್ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಇದನ್ನು ಗಮನಿಸಿದ ಸಂಸ್ಥೆಯ ಸಿಬಂದಿ ತತ್‌ಕ್ಷಣ ಮನೆಯವರಿಗೆ ಮನೆಯಿಂದ ಹೊರಗೆ ಬರದಂತೆ ಸೂಚಿಸಿದರು.ನಂತರ ಚಿರತೆ ಮರೆಯಾಗಿದೆ.
2018 ರಿಂದ ಇಲ್ಲಿಯವರೆಗೆ ಗ್ರಾಮೀಣ ಪರಿಸರದಲ್ಲಿ 8 ಚಿರತೆಗಳು ಬೋನಿಗೆ ಬಿದ್ದಿದೆ. ಒಂದೇ ವರ್ಷದಲ್ಲಿ ನಾಲ್ಕು ಚಿರತೆ ಸೆರೆಯಾಗಿತ್ತು. ಇಲ್ಲಿನ ವಕ್ವಾಡಿ, ಹೂವಿನಕೆರೆ, ಉಳ್ತೂರು, ಕೆದೂರು, ಗೋಪಾಡಿ, ಅಸೋಡು, ಮಾಲಾಡಿ ಪರಿಸರದಲ್ಲಿ ನಿರಂತರವಾಗಿ ಸಾಕು ನಾಯಿ, ದನ ಕರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ, ಮನುಷ್ಯರ ಮೇಲಿನ ದಾಳಿಗೆ ಹೆದರಿದ ಜನರು ಕತ್ತಲಾಗುತ್ತಾ ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದಾರೆ.ಇದೀಗ ಚಿರತೆ ಪೇಟೆಯ ಕಡೆಗೆ ಬರುತ್ತಿವೆ.