ಇತರೆ

ಕುಂದಾಪುರ:ತಲ್ಲೂರಿನಲ್ಲಿ ವಿವಾಹಿತ ಮಹಿಳೆ ಆತ್ಮಹತ್ಯೆ 

Views: 335

ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಸಮೀಪ ತಲ್ಲೂರಿನಲ್ಲಿ ವಿವಾಹಿತ ಮಹಿಳೆಯೊಬ್ಬರು ಜುಲೈ27ರಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆ ಪವಿತ್ರ(37)

ಪ್ರಕರಣ ವಿವರ : ವಾರಂಬಳ್ಳಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ಮಗಳು ಪವಿತ್ರ (37) ಇವರನ್ನು 2016 ರಲ್ಲಿ ಉಪ್ಪಿನಕುದ್ರು ವಾಸಿ ಶೇಷಗಿರಿ ರವರ ಮಗ ಶ್ರೀಧರ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಎರಡುವರೆ ವರ್ಷದ ಶಿವನ್ಯ ಎಂಬ ಹೆಣ್ಣು ಮಗು ಇರುತ್ತದೆ. ಸುಮಾರು 3 ವರ್ಷಗಳ ಹಿಂದೆ ಮಗಳು ಪವಿತ್ರ ತನ್ನ ಗಂಡ ಹಾಗೂ ಮಗುವಿನೊಂದಿಗೆ ತಲ್ಲೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದು   ಜುಲೈ 27ರಂದು ರಂದು ಸಂಜೆ ಸುಮಾರು 3ಗಂಟೆಗೆ ಮಗಳು ಪವಿತ್ರಾಳಿಗೆ ಕರೆ ಮಾಡಿದಾಗ ಯಾರೋ ಒಬ್ಬರು ಹೆಂಗಸು ಕರೆಯನ್ನು ಸ್ವೀಕರಿಸಿ ಮಗಳು ಕುತ್ತಿಗೆಗೆ ಬಳ್ಳಿ ಹಾಕಿಕೊಂಡಿದ್ದಾಳೆ ಕೂಡಲೇ ಬನ್ನಿ ಎಂಬುವುದಾಗಿ ತಿಳಿಸಿದರು ತಾಯಿ ತಲ್ಲೂರಿಗೆ ಬಂದು ನೋಡಿದಾಗ ಪವಿತ್ರ ಕಬ್ಬಿಣದ ಹುಕ್ಕಿಗೆ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ತಿಳಿದುಬಂದಿದೆ.ಗಂಡ ಹೆಂಡತಿ ಯಾವಾಗಲೂ ಜಗಳವಾಡುತ್ತಿದ್ದರು ಎಂದು ಪವಿತ್ರಳ ತಾಯಿ ಸುಮತಿ ಆರೋಪಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.

Related Articles

Back to top button