ಇತರೆ

ಕಾರಿನಲ್ಲೇ ಮಹಿಳೆ ಸಜೀವ ದಹನ ಬಿಗ್ ಟ್ವಿಸ್ಟ್..! 

Views: 184

ಕನ್ನಡ ಕರಾವಳಿ ಸುದ್ದಿ: ಕಾರಿನಲ್ಲೇ ಮಹಿಳೆ ಸಜೀವ ದಹನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪತಿಯನ್ನು ಬಿಟ್ಟು ಬರಲು ಒಪ್ಪದಿದ್ದಕ್ಕೆ ಪ್ರಿಯತಮೆಯನ್ನು ಕಾರಿನಲ್ಲಿ ಹತ್ಯೆಗೈದು, ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತನಿಖೆ ವೇಳೆ ಬಯಲಾಗಿದೆ.

ದೇವನಹಳ್ಳಿ ಮೂಲದ ಸುಜಾತ(35) ಕೊಲೆಯಾದ ಮಹಿಳೆ.

ಈಕೆಯ ಪ್ರಿಯಕರ ರಾಮಾಂಜಿನಪ್ಪ ಕೊಲೆ ಮಾಡಿ ಅತ್ಮಹತ್ಯೆ ಮಾಡಿಕೊಂಡವ. ಮೃತ ಸುಜಾತ ಹಾಗೂ ರಾಮಾಂಜಿನಪ್ಪ ಅನೈತಿಕ ಸಂಬಂಧ ಹೊಂದಿದ್ದರು. ಇದೇ ಕಾರಣಕ್ಕಾಗಿ ಕಳೆದ 4 ತಿಂಗಳ ಹಿಂದೆ ರಾಮಾಂಜಿನಪ್ಪ ಹೆಂಡತಿಯಿಂದ ಡಿವೋರ್ಸ್ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ.

ಈತ ಸುಜಾತಾಳಿಗೂ ಗಂಡನ ಬಿಟ್ಟು ಬರುವಂತೆ ಪದೇಪದೆ ಕಿರುಕುಳ ನೀಡುತ್ತಿದ್ದರೂ ಸುಜಾತ ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ರಾಮಾಂಜಿನಪ್ಪ ಏ.2ರಂದು ಕಾರಿನಲ್ಲಿ ಸುಜಾತಾಳಿಗೆ ಹೊಡೆದು ಕೊಲೆ ಮಾಡಿ, ಬಳಿಕ ಕಾರಿಗೆ ಬೆಂಕಿಯಿಟ್ಟು ಪರಾರಿಯಾಗಿದ್ದ.

ಪೊಲೀಸರ ತನಿಖೆ ವೇಳೆ ಆ ಕಾರು ಮಾರಸಂದ್ರದ ಸುರೇಶ್ ಅವರದ್ದು ಎಂದು ತಿಳಿದು ಬಂದಿತ್ತು. ಬಳಿಕ ಕಾರನ್ನು ರಾಮಾಂಜಿನಪ್ಪ ತೆಗೆದುಕೊಮಡು ಹೋಗಿರುವುದಾಗಿ ಗೊತ್ತಾಗಿದೆ. ಇದೀಗ ಬೆಂಗಳೂರಿನ ಬಿಡದಿ ಬಳಿ ರೈಲ್ವೇ ನಿಲ್ದಾಣ ಬಳಿ ರಾಮಾಂಜಿನಪ್ಪ ಶವ ಪತ್ತೆಯಾಗಿದ್ದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

Related Articles

Back to top button
error: Content is protected !!