ಶಿಕ್ಷಣ

ಕರ್ನಾಟಕ ಪಬ್ಲಿಕ್ ಸ್ಕೂಲ್, ಬಿದ್ಕಲ್ಕಟ್ಟೆ:ಮಕ್ಕಳ ದಿನಾಚರಣೆ ಮತ್ತು ಪೋಷಕ- ಶಿಕ್ಷಕರ ಮಹಾಸಭೆ

Views: 229

ಕನ್ನಡ ಕರಾವಳಿ ಸುದ್ದಿ: ನವೆಂಬರ್ 14 ಪಂಡಿತ್ ಜವಾಹರಲಾಲ್ ನೆಹರೂ ಹುಟ್ಟುಹಬ್ಬವಾದ ಮಕ್ಕಳ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆಯ ಪ್ರಾಥಮಿಕ ವಿಭಾಗದಲ್ಲಿ ಸಡಗರ ಸಂಭ್ರಮದೊಂದಿಗೆ ಮಕ್ಕಳ ದಿನಾಚರಣೆ ಹಾಗೂ ಮಹಾ ಪೋಷಕರ ಸಭೆ ಮತ್ತು ಸಾಮಾಜಿಕ ಪರಿಶೋಧನಾ ಮೌಲ್ಯಮಾಪನ ಸಭೆಯನ್ನು ಕುಂದಾಪುರ ತಾಲೂಕು ಪಂಚಾಯತ್ನ ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕರಾದ ಶ್ರೀಯುತ ರಾಜೇಶ ಕೆ.ಸಿ ಅಧ್ಯಕ್ಷತೆಯಲ್ಲಿ ಜರುಗಿತು.

ದೀಪ ಪ್ರಜ್ವಲನದ ಮೂಲಕ ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಚಂದ್ರಶೇಖರ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸರಕಾರಿ ಶಾಲೆಗಳ ಬಲವರ್ಧನೆಗೆ ಇದೊಂದು ಅತ್ಯಂತ ಮಹತ್ವಪೂರ್ಣ ಕಾರ್ಯಕ್ರಮ ಎಂದರು. ಮ್ಯಾಗ್ನೆಟ್ ಸ್ಕೂಲ್ ಗಳ ಪರಿಕಲ್ಪನೆ ಸಾಕಾರಗೊಂಡು ಸರಕಾರಿ ಶಾಲೆಗಳ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದಲ್ಲಿ ಖಂಡಿತವಾಗಿಯೂ ಸರಕಾರಿ ಶಾಲೆಗಳ ಬಗ್ಗೆ ಪೋಷಕರ ಒಲವು ಇನ್ನಷ್ಟು ಜಾಸ್ತಿಯಾಗಲಿದೆ ಎಂದರು.

ನಂತರ ವೇದಿಕೆಯಲ್ಲಿರುವ ಎಲ್ಲಾ ಗಣ್ಯರು ಸೇರಿ, ನೆಹರೂಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಜವಾಹರಲಾಲ್ ನೆಹರೂರವರ ಸಾಧನೆಗಳನ್ನು ಸ್ಮರಿಸಿದರು.

ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀ ಗೌತಮಶೆಟ್ಟಿ, ಮೊಳಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಮನೋಜ್ ಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಶಾಂತ್, ಕೋಶಾಧಿಕಾರಿ ದಿವಾಕರ ಆಚಾರ್, ಕುಂದಾಪುರದ ಹೆಲ್ಪಿಂಗ್ ಹ್ಯಾಂಡ್ಸ್ ತಂಡದ ಅಧ್ಯಕ್ಷರಾದ ಪ್ರದೀಪ್ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಉದಯ್ ಕುಮಾರ್ ಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ಸತೀಶ ಹೆಚ್.ಆರ್ ಮತ್ತು ಸಾಮಾಜಿಕ ಪರಿಶೋಧನಾ ತಂಡದ ಸಂಪನ್ಮೂಲ ವ್ಯಕ್ತಿ ಪ್ರವೀಣ ಆಚಾರ್ಯ, ಎಸ್.ಡಿ.ಎಂ.ಸಿ. ಸದಸ್ಯರಾದ ರಾಜ್ ಕುಮಾರ್ ಅಡಿಗ, ಸುನೀತಾ ಎಂ ಹೆಬ್ಬಾರ್, ಎಂ.ಕೆ.ಗಣೇಶ್ ಹಾಗೂ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಸತೀಶ ಶೆಟ್ಟಿಗಾರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕುಂದಾಪುರದ ಹೆಲ್ಪಿಂಗ್ ಹ್ಯಾಂಡ್ ತಂಡದ ಪ್ರಾಯೋಜಕತ್ವದಲ್ಲಿ ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಲ್ಲಿ ಎಸ್.ಎ-1 ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ+ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ತರಗತಿವಾರು ಸಾಧನೆಯಲ್ಲಿ ಅತಿ ಹೆಚ್ಚು ಎ+ ಗ್ರೇಡ್ ಗಳಿಸಿರುವ ತರಗತಿಗೆ ಗಡಿಯಾರದ ಉಡುಗೊರೆ ನೀಡಲಾಯಿತು.

ನಂತರ ಹೆಲ್ಲಿಂಗ್ ಹ್ಯಾಂಡ್ ತಂಡದ ಮುಖ್ಯಸ್ಥರಾದ ಶ್ರೀ ಪ್ರದೀಪ್ ಮಾತನಾಡಿ, ಶಾಲೆಯ ವಿಶೇಷ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಬಳಿಕ ಸಾಮಾಜಿಕ ಲೆಕ್ಕ ಪರಿಶೋಧನೆಯ ಯೋಜನಾ ಸಂಪನ್ಮೂಲ ವ್ಯಕ್ತಿಗಳಾಗಿರುವ ಶ್ರೀ ಪ್ರವೀಣ ಆಚಾರ್ಯ ಇವರು ಶಾಲೆಯಲ್ಲಿ ಕೈಗೊಂಡಿರುವ ಸಾಮಾಜಿಕ ಲೆಕ್ಕ ಪರಿಶೋಧನೆಯ ಸಮಗ್ರ ವರದಿಯನ್ನು ಮಂಡಿಸಿದರು.

ಸಭಾಧ್ಯಕ್ಷರಾದ ಶ್ರೀಯುತ ರಾಜೇಶ ಕೆ.ಸಿ ಮಾತನಾಡಿ, ಶಾಲಾ ಅಭಿವೃದ್ಧಿಯ ಕುರಿತು ಹಾಗೂ ಶೈಕ್ಷಣಿಕ ಪ್ರಗತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ದತ್ತಿನಿಧಿಯ ಪ್ರಧಾನ ದಾನಿಗಳಾದ ನಿವೃತ್ತ ಶಿಕ್ಷಕ ಶ್ರೀ ಉದಯಕುಮಾರ್ ಶೆಟ್ಟಿಯವರು ದಾನಿಗಳ ನೆಲೆಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ, ಸರಕಾರಿ ಶಾಲಾ ಅಭಿವೃದ್ಧಿಯಲ್ಲಿ ದಾನಿಗಳ ಪಾತ್ರ ಅತ್ಯಂತ ಮಹತ್ವದ್ದು ಎಂದರು.

ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀ ಸತೀಶ ಶೆಟ್ಟಿಗಾರ ಇವರು ಶಾಲಾ ಶೈಕ್ಷಣಿಕ ಪ್ರಗತಿಯ ವಿಶ್ಲೇಷಣೆ ಮಾಡಿ ಶಾಲಾ ಕಾರ್ಯಚಟುವಟಿಕೆಗಳಲ್ಲಿ ದಾನಿಗಳು ಹಾಗೂ ಇತರೇ ಭಾಗೀದಾರರ ಪಾತ್ರವನ್ನು ಸ್ಮರಿಸಿದರು.

ತದನಂತರ ಅತಿಥಿಗಳ ಸಮ್ಮುಖದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ 30 ಮಂದಿ ಅದೃಷ್ಟಶಾಲಿ ವಿದ್ಯಾರ್ಥಿಗಳು ಮತ್ತು ಮಹಾ ಪೋಷಕರ ಸಭೆಯ ಅಂಗವಾಗಿ 10 ಮಂದಿ ಅದೃಷ್ಟಶಾಲಿ ಪೋಷಕರನ್ನು ಆಯ್ಕೆ ಮಾಡಿ ಬಹುಮಾನ ನೀಡಿ ಗೌರವಿಸಲಾಯಿತು. ಶಾಲೆಯ ಎಲ್ಲ ಶಿಕ್ಷಕರಿಗೆ ಪೆನ್ನು ಮತ್ತು ಒಂದನೇ ತರಗತಿಯ ಎಲ್ಲ ಮಕ್ಕಳಿಗೆ ಪೆನ್ಸಿಲ್ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಹ ಶಿಕ್ಷಕ ರಾಜೀವ ಕುಲಾಲ್, ಶ್ರೀನಿವಾಸ, ಸಹ ಶಿಕ್ಷಕಿಯರಾದ ಶ್ರೀಮತಿ ಜಯಲಕ್ಷ್ಮೀ ಲಲಿತಾ, ಮಾಲತಿ, ಶಾರದಾ, ಚಿತ್ರಾಕುಮಾರಿ, ರಶ್ಮಿ, ಪೂರ್ಣಿಮಾ, ಮಮತಾ, ರೂಪಾ ಮಟ್ಟಿಕೋಟಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುಲೋಚನಾ, ಅತಿಥಿ ಶಿಕ್ಷಕಿ ಮಹಾಲಕ್ಷ್ಮೀ, ಗೌರವ ಶಿಕ್ಷಕಿ ಭಾರತಿ, ಹೆಲ್ಪಿಂಗ್ ಹ್ಯಾಂಡ್ ತಂಡದ ಸದಸ್ಯರು, ಶಾಲಾ ಅಡುಗೆ ಸಹಾಯಕರಾದ ಆಶಾ, ಶಾಂತ, ಪುಷ್ಪಾ ಜ್ಯೋತಿ, ಸವಿತಾ ಹಾಗೂ ಇನ್ನೂರಕ್ಕೂ ಹೆಚ್ಚು ಮಂದಿ ಪೋಷಕರು ಹಾಜರಿದ್ದರು.

ಶಾಲಾ ವಿದ್ಯಾರ್ಥಿಗಳಿಗೆ ಸಿಹಿಯೂಟದ ಜೊತೆಗೆ ಮೊಟ್ಟೆ ಬಾಳೆಹಣ್ಣು ಮತ್ತು ಎಲ್ಲ ಪೋಷಕರಿಗೆ ಸಿಹಿಯೂಟ ನೀಡಲಾಯಿತು.

ಆರಂಭದಲ್ಲಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಸತೀಶ ಶೆಟ್ಟಿಗಾರ್ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರೆ ಸಹಶಿಕ್ಷಕಿ ಚಿತ್ರಾ ಕುಮಾರಿ ವಂದಿಸಿದರು. ಸಹಶಿಕ್ಷಕಿ ಶಾರದಾ ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button