ಶಿಕ್ಷಣ

ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಪ್ರೌಢಶಾಲೆಗೆ ಉಚಿತ ನೋಟ್ಸ್ ಪುಸ್ತಕ ವಿತರಣೆ

Views: 132

ಕನ್ನಡ ಕರಾವಳಿ ಸುದ್ದಿ: ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಕಮಲಶಿಲೆ ಇಲ್ಲಿನ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಉದ್ಯಮಿಗಳಾದ ಎಲ್ ರಮೇಶ ಗೌಡರವರು ಕೊಡಮಾಡಿದ ಸುಮಾರು 1,65,000 ಮೌಲ್ಯದ ಉಚಿತ ನೋಟ್ಸ್ ಪುಸ್ತಕ ವಿತರಣಾ ಸಮಾರಂಭವು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರುಗಿತು.

ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ವನ್ನು  ಶ್ರೀ ಸಚ್ಚಿದಾನಂದ ಚಾತ್ರ ಅನುವಂಶಿಕ ಧರ್ಮದರ್ಶಿಗಳು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಇವರು ನೆರವೇರಿಸಿದರು.

 ಈ ಕಾರ್ಯಕ್ರಮದಲ್ಲಿ ಶ್ರೀ. ಟಿ.ಎನ್.ವೆಂಕಟೇಶ್ ಆಡಳಿತಾಧಿಕಾರಿಗಳು ಕಾರ್ಖಾನೆಗಳು ಮತ್ತು ಬಾಯ್ಲರ್ ಗಳ ಇಲಾಖೆ ಬೆಂಗಳೂರು. ಶ್ರೀ ಶ್ರೀಧರ್. ಬಿ.ಅಧೀಕ್ಷಕರು ಕಾರ್ಖಾನೆಗಳು ಮತ್ತು ಬಾಯ್ಲರ್ ಗಳ ಇಲಾಖೆ ಬೆಂಗಳೂರು, ಶ್ರೀ ಸುಧೀರ್ ಸುವರ್ಣ ಇ.ಎ.ಎ.ಕಾರ್ಖಾನೆಗಳು ಮತ್ತು ಬಾಯ್ಲರ್ ಗಳ ಇಲಾಖೆ ಮಂಗಳೂರು,.ಶ್ರೀ ಮಹೇಶ್ ಅಮೀನ್ ಇ.ಎ.ಎ.ಕಾರ್ಖಾನೆಗಳು ಮತ್ತು ಬಾಯ್ಲರ್ ಗಳ ಇಲಾಖೆ ಮಂಗಳೂರು,.ಶ್ರೀ ರಮೇಶ್ ಗೌಡ ಮಾಲೀಕರು ಎ ಎಂ ಎಕ್ಸ್ಪ್ರೆಸ್ ಅಂಡ್ ಲಾಜಿಸ್ಟಿಕ್ಸ್. ಶ್ರೀ ರಾಘವೇಂದ್ರ ಬಾಳಿಗ ನಿರ್ದೇಶಕರು ಆರ್ಯನ್ ಟ್ರಾನ್ಸ್ಲೈನ್ ಎಕ್ಸ್ಪ್ರೆಸ್.ಸುರೇಶ್ ಜಗತ್ ಪಾಲ್ಸ್  ಉದ್ಯಮಿಗಳು,ರಾಜೇಂದ್ರ ಚಾತ್ರ ಬರೆಗುಂಡಿ ಇವರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕರಾದ ಎಂ ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ಸಹಶಿಕ್ಷಕಿ ರೇಖಾ ವಂದಿಸಿದರು.  ಸಹ  ಶಿಕ್ಷಕಿಯರಾದ ಶಿಲ್ಪಾ ಮತ್ತು ಸ್ವಾತಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ  ವೃಂದದವರು ಉಪಸ್ಥಿತರಿದ್ದರು.

Related Articles

Back to top button
error: Content is protected !!