ಕಣ್ಮರೆಯಾಗಿದ್ದ ಗೋಲಿ ಸೋಡಾಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ

Views: 78
ಕನ್ನಡ ಕರಾವಳಿ ಸುದ್ದಿ:ಒಂದು ಕಾಲದಲ್ಲಿ ಮನೆಯ ಪ್ರಮುಖ ಪಾನೀಯವಾಗಿದ್ದ ಗೋಲಿ ಸೋಡಾ, ಮಾರಾಟದ ವಿಸ್ತರಣೆ ಮತ್ತು ಹೊಸ ಆವಿಷ್ಕಾರಣೆಯಿಂದ ಜಾಗತಿಕ ಮಟ್ಟಕ್ಕೆ ಬೆಳೆದಿದೆ. ಅಮೆರಿಕ, ಬ್ರಿಟನ್, ಐರೋಪ್ಯ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಈಗಾಗಲೇ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ ಎಂದು ತಿಳಿಸಿದೆ.
ಭಾರತದ ಸಾಂಪ್ರದಾಯಿಕ ಪಾನೀಯವಾದ ಗೋಲಿ ಸೋಡಾಗೆ ಅಮೆರಿಕ ಸೇರಿದಂತೆ ಪ್ರಮುಖ ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಬೇಡಿಕೆ ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಭಾನುವಾರ ತಿಳಿಸಿದೆ. ಲುಲು ಹೈಪರ್‌ಮಾರ್ಕೆಟ್ ನೆರ್ ಮಾರ್ಕೆಟ್ ಗಲ್ಫ್ ಪ್ರಾಂತ್ಯದ ದೊಡ್ಡ ಚಿಲ್ಲರೆ ಮಾರಾಟಗಾರರಲ್ಲಿ ಒಂದಾಗಿದ್ದು, ಗೋಲಿ ಪಾಪ್ ಸೋಡಾ ಬ್ರಾಂಡ್ ನಡಿ ಭಾರತ ಮಾರಾಟ ಮಾಡುತ್ತಿದೆ ಎಂದು ತಿಳಿಸಿದೆ.
ಬಹುರಾಷ್ಟ್ರೀಯ ಪಾನೀಯ ಕಂಪನಿಗಳ ಪ್ರಾಬಲ್ಯದಿಂದ ಬಹುತೇಕ ಕಣ್ಮರೆಯಾಗುತ್ತಿದ್ದ ಗೋಲಿ ಸೋಡಾ, ಸರಕಾರದ ಉತ್ತೇಜನ ಮತ್ತು ರಪ್ತಿನಿಂದ ಗೋಲಿ ಸೋಡಾ ಜಾಗತಿಕ ಮಾರುಕಟ್ಟೆ ಯಲ್ಲಿ ಆಹಾರ ಮತ್ತು ಪಾನೀಯ ಉತ್ಪನ್ನಗಳು ಮಹತ್ವದ ಸ್ಥಾನ ಪಡೆದಿದೆ ಎಂದು ತಿಳಿಸಿದೆ.