ಸಾಂಸ್ಕೃತಿಕ

ಇಂದು ಮದುವೆಯಾಗಲಿರುವ ಹುಡುಗನನ್ನು ಕೊನೆಗೂ ಪರಿಚಯಿಸಿದ ಚೈತ್ರಾ ಕುಂದಾಪುರ 

Views: 635

ಕನ್ನಡ ಕರಾವಳಿ ಸುದ್ದಿ: ಬಿಗ್ ಬಾಸ್ ಸೀಸನ್- 11ರ ಫೈರ್‌ ಬ್ರ್ಯಾಂಡ್‌ ಎಂದೇ ಖ್ಯಾತಿ ಪಡೆದಿದ್ದ ಚೈತ್ರಾ ಕುಂದಾಪುರ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.ಇದರ ಜೊತೆಗೆ ಚೈತ್ರಾ ಕುಂದಾಪುರ ಅವರು ಕೈಹಿಡಿಯುತ್ತಿರುವ ಹುಡುಗ ಯಾರು?.

ಚೈತ್ರಾ ಕುಂದಾಪುರ ಅವರು ಮದುವೆ ಆಗುತ್ತಿರುವ ಹುಡುಗ ಯಾರು ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿದೆ. ಏಕೆಂದರೆ ಬಿಗ್ ಬಾಸ್ ಬಳಿಕ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಅವರು ಎಲ್ಲರಿಗೂ ಗೊತ್ತು. ಅದರಂತೆ ಅವರು ವಿವಾಹವಾಗುತ್ತಿರುವ ಹುಡುಗನನ್ನು ಪರಿಚಯಿಸಿದ್ದಾರೆ.

ಮದುವೆ ಆಗುತ್ತಿರುವ ಹುಡುಗನ ಹೆಸರು ಶ್ರೀಕಾಂತ್ ಕಶ್ಯಪ್. ಕಾಲೇಜು ದಿನಗಳಿಂದಲೂ ಚೈತ್ರಾ ಹಾಗೂ ಶ್ರೀಕಾಂತ್ ಕಶ್ಯಪ್‌ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಈ ನಡುವೆ ಚೈತ್ರಾ ಅವರು ಮದುವೆ ಬಗ್ಗೆ ಮಾತು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಇಬ್ಬರ ಪ್ರೀತಿಗೆ ಅಧಿಕೃತವಾಗಿ ಮುದ್ರೆ ಬಿದ್ದಿದೆ.

ಶ್ರೀಕಾಂತ್ ಕಶ್ಯಪ್ ಮೂಲತಃ ಉಡುಪಿ ಜಿಲ್ಲೆಯ ಹಿರಿಯಡ್ಕದವರು.ಆನಿಮೇಷನ್ ಓದಿದ್ದರೂ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇದೆ. ಚೈತ್ರಾಗೆ, ಶ್ರೀಕಾಂತ್ ಕಾಲೇಜು ದಿನಗಳಿಂದಲೇ ಪರಿಚಯ. ಇದೇ ಪರಿಚಯ ಸ್ನೇಹವಾಗಿ ಬಳಿಕ ಪ್ರೀತಿಯಾಗಿ ಮಾರ್ಪಟ್ಟು 12 ವರ್ಷಗಳ ಕಾಲ ಲವ್ ಮಾಡಿದ್ದರು.

ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರ ಮದುವೆ ಇಂದು ಕುಂದಾಪುರ ತಾಲೂಕಿನ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ. ಚೈತ್ರಾ ಕುಂದಾಪುರ ಅವರ ಮೆಹಂದಿ ಕಾರ್ಯಕ್ರಮ ಜೋರಾಗಿ ನಡೆದಿದ್ದು ಇದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Related Articles

Back to top button