ಆಸ್ಪತ್ರೆಯಿಂದ ಮನೆಗೆ ಬರುವಾಗ ಸತ್ತ ವ್ಯಕ್ತಿ ಪುನರ್ಜನ್ಮ!

Views: 379
ಕನ್ನಡ ಕರಾವಳಿ ಸುದ್ದಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಸತ್ತಿದ್ದಾನೆ ನಿಮ್ಮ ಊರಿಗೆ ತೆಗೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದರು. ಇದನ್ನು ನಂಬಿದ ಕುಟುಂಬಸ್ಥರು ಕಣ್ಣೀರಿಡುತ್ತ ಮನೆಗೆ ವಾಪಸ್ ಬರುವಾಗ ಸತ್ತ ವ್ಯಕ್ತಿ ಪುನರ್ಜನ್ಮಪಡೆದು ಬದುಕಿದ ಘಟನೆ ಹಾವೇರಿ ಜಿಲ್ಲೆಯ ಬಂಕಾಪುರ ಗ್ರಾಮದಲ್ಲಿ ನಡೆದಿದೆ.
ಆಸ್ಪತ್ರೆಯ ICUನಲ್ಲಿ ಮಲಗಿದ್ದ ವ್ಯಕ್ತಿ ಬದುಕಿಲ್ಲ ಎಂದು ವೈದ್ಯರೇ ಹೇಳಿದರು. ದುಃಖದಲ್ಲಿ ಮನೆಗೆ ವಾಪಸ್ ಬರುವಾಗ ಒಂದು ಡಾಬಾ ಅಂಗಡಿ ಮುಂದೆ ಪವಾಡವೇ ನಡೆದಿದ್ದು, ಸತ್ತಿದ್ದ ವ್ಯಕ್ತಿಗೆ ಮರಳಿ ಉಸಿರು ಬಂದಿದೆ.
ಸತ್ತು ಬದುಕಿ ಬಂದಿರುವ ವ್ಯಕ್ತಿ. ಹೆಸರು ಬಿಷ್ಣಪ್ಪ ಅಶೋಕ ಗುಡಿಮನಿ ಅಲಿಯಾಸ್ ಮಾಸ್ತರ್. ಬಂಕಾಪುರದ ಮಂಜುನಾಥ ನಗರದ ನಿವಾಸಿ.
ಏನಿದು ಪವಾಡ?
ಕಳೆದ 3-4 ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಿಷ್ಣಪ್ಪನನ್ನು ಧಾರವಾಡ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿತ್ತು. ಬಿಷ್ಣಪ್ಪ ಉಸಿರಾಡದಿದ್ದಾಗ ಅವರು ಮೃತಪಟ್ಟಿದ್ದಾರೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು. ವೈದ್ಯರ ಮಾತು ಕೇಳಿ ಸಂಬಂಧಿಕರಿಗೆಲ್ಲ ಬಿಷ್ಣಪ್ಪನ ಸಾವಿನ ಸುದ್ದಿಯನ್ನು ಕುಟುಂಬಸ್ಥರು ತಿಳಿಸಿದ್ರು.
ಸಂಬಂಧಿಕರ ಜೊತೆ ಆಂಬ್ಯುಲೆನ್ಸ್‌ನಲ್ಲಿ ಬಂಕಾಪುರಕ್ಕೆ ಕರೆದುಕೊಂಡು ಬರುತ್ತಿದ್ದಾಗ ಬಿಷ್ಣಪ್ಪ ಹಾ.. ಎಂದು ಉಸಿರಾಡಲು ಶುರು ಮಾಡಿದ್ದಾನೆ.
ಇನ್ನು ಅಚ್ಚರಿಯ ವಿಚಾರ ಏನಂದ್ರೆ ಬಿಷ್ಟಪ್ಪ ಗುಡಿಮನಿ ಸಾವನ್ನಪ್ಪಿದ್ದಾನೆ ಎಂದು ನಿಧನ ಸುದ್ದಿಯ ಬ್ಯಾನರ್ ಸಹ ಹಾಕಿದ್ದರು. ಸ್ನೇಹಿತರು, ಮನೆಯವರು ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಓಂ ಶಾಂತಿ ಎಂದು ಸಹ ಹಾಕಿದ್ದರು. ಇದೀಗ ಸತ್ತಿದ್ದವನು ಮತ್ತೆ ಬದುಕಿದ್ದಕ್ಕೆ ಸ್ಥಳೀಯರು ಇದು ದೇವರ ಪವಾಡ ಎನ್ನುತ್ತಿದ್ದಾರೆ
ಮೃತಪಟ್ಟಿದ್ದಾನೆಂದು ಭಾವಿಸಿದ್ದ ಬಿಷ್ಣಪ್ಪಗೆ ಸದ್ಯ ಪುನರ್ಜನ್ಮ ಸಿಕ್ಕಿದೆ. ಎಲ್ಲರಿಗೂ ಆಶ್ಚರ್ಯವಾಗಿ ಸಮೀಪದ ಶಿಗ್ಗಾಂವಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಎನ್ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ವೈದ್ಯರೇ ಸತ್ತಿದ್ದಾನೆಂದು ಹೇಳಿದ್ದ ವ್ಯಕ್ತಿ ಮರಳಿ ಬದುಕಿದ್ದು ನಿಜಕ್ಕೂ ಪವಾಡವೇ ಸರಿ.