ಇತರೆ
ಆನಂದಪುರ ಬಳಿ ಅಪಘಾತ, ಮಾವ- ಅಳಿಯ ಸಾವು

Views: 102
ಕನ್ನಡ ಕರಾವಳಿ ಸುದ್ದಿ: ಎಕ್ಸ್‌ಎಲ್ ಮತ್ತು ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನದ ಮಧ್ಯೆನಡೆದ ಅಪಘಾತದಲ್ಲಿ ಮಾವ ಅಳಿಯ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರ ತಾಲೂಕು ಆನಂದಪುರ ಸಮೀಪದ ಗೌತಮಪುರದಲ್ಲಿ ಘಟನೆ ಸಂಭವಿಸಿದೆ.
ಮೃತರನ್ನು ವಾಸಪ್ಪ (70) ಮತ್ತು ಸತೀಶ್ (40) ಎಂದು ಗುರುತಿಸಲಾಗಿದೆ.ಸತೀಶ್ ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಟಿವಿಎಸ್ ಎಕ್ಸ್‌ಎಲ್ ಆನಂದಪುರದ ಕಡೆಗೆ ತೆರಳುತ್ತಿತ್ತು. ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನವು ತ್ಯಾಗರ್ತಿ ಕಡೆಗೆ ಹೋಗುತ್ತಿತ್ತು. ಘಟನಾ ಸ್ಥಳಕ್ಕೆ ಆನಂದಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.