ಯುವಜನ

ಆಟವಾಡಲು ಕೆರೆಗೆ ಇಳಿದು ಕೆಸರು ತುಂಬಿದ ಕೆರೆಯಲ್ಲಿ ಮೃತಪಟ್ಟ ಬಾಲಕಿ

Views: 82

ಕನ್ನಡ ಕರಾವಳಿ ಸುದ್ದಿ: ಆಟವಾಡಲೆಂದು ಕೆರೆಗೆ ಹಾರಿದ ಬಾಲಕಿಯೊಬ್ಬಳು ಮೇಲಕ್ಕೆ ಬರಲಾಗದೇ ಮೃತಪಟ್ಟ  ಘಟನೆ  ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಅತ್ತೂರು ಗ್ರಾಮದ ಚೆನ್ನಂಗೊಲ್ಲಿಯಲ್ಲಿ ನಡೆದಿದೆ.

ಕಾಫಿ ಬೆಳೆಗಾರ ಕೆ.ಕೆ.ತಿಮ್ಮಯ್ಯ ಎಂಬುವವರಿಗೆ ಸೇರಿದ ಕೆರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ತೋಟದ ಕಾರ್ಮಿಕರಾಗಿರುವ ಭವಾನಿ ಎಂಬುವವರ 9 ವರ್ಷದ ಪುತ್ರಿ ಮೃತ ದುರ್ದೈವಿ.

ತನ್ನ ಸಹಪಾಠಿಗಳೊಂದಿಗೆ ಕೆರೆಯ ಬದಿಯಲ್ಲಿ ಆಟವಾಡುತ್ತಿದ್ದ ಸಂದರ್ಭ ಈಕೆ ಹಾಗೂ ಇನ್ನಿಬ್ಬರು ಮಕ್ಕಳು ಕೆರೆಗೆ ಹಾರಿದ್ದರು. ಆದರೆ ಕೆರೆಯಲ್ಲಿ ನೀರು ಬತ್ತಿ ಕೆಸರು ತುಂಬಿದ್ದರಿಂದ ಮೂವರು ಅದರೊಳಗೆ ಸಿಲುಕಿ ಕಿರುಚಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಾರ್ಮಿಕರು ಇಬ್ಬರನ್ನು ರಕ್ಷಿಸಿದ್ದರು. ಈ ಬಾಲಕಿಯನ್ನು ಕೆಸರಿಂದ ಹೊರಕ್ಕೆ ತರುವ ಪ್ರಯತ್ನ ವಿಫಲವಾದ್ದರಿಂದ ಆಕೆ ಅಸುನೀಗಿದ್ದಾಳೆ ಎನ್ನಲಾಗಿದೆ.

ಚೆನ್ನಂಗೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಗೋಣಿಕೊಪ್ಪ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button