ಅಹಮದಾಬಾದ್ ನಲ್ಲಿ ವಿಮಾನ ಪತನ: 100 ಕ್ಕೂ ಮಂದಿ ಪ್ರಯಾಣಿಕರು ಸಾವು

Views: 183
ಕನ್ನಡ ಕರಾವಳಿ ಸುದ್ದಿ:ಏರ್ ಇಂಡಿಯಾ ವಿಮಾನ ಮೇಲೇರಿರುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಭೂಮಿಗೆ ಅಪ್ಪಳಿಸಿದ ಘಟನೆ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ನಡೆದಿದೆ.
ವಿಮಾನದಲ್ಲಿ ಸುಮಾರು 242 ಪ್ರಯಾಣಿಕರಿದ್ದರೆಂದು ತಿಳಿದುಬಂದಿದ್ದು ಇವರಲ್ಲಿ 55 ಬ್ರಿಟನ್ ಪಜೆಗಳು ,ಒಬ್ಬ ಪೋರ್ಚುಗಲ್ ಹಾಗು 149 ಭಾರತೀಯರು ಹಾಗು 15 ಸಿಬ್ಭಂಧಿ ಇದ್ದರು ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಬಹುತೇಕರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಆಕಾಶಕ್ಕೆ ಹಾರಿದ ಕೆಲವೇ ಕ್ಷಣಗಳಲ್ಲಿ ಭೂಮಿಗೆ ಅಪ್ಪಳಿಸಿ ಬೆಂಕಿ ಉಂಡೆಯಾಗಿದೆ. ಇಂದು ಮಧ್ಯಾಹ 1.17ಕ್ಕೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೋಗುವ ವಿಮಾನ ಕೇವಲ 20 ನಿಮಿಷಕ್ಕೆ ದುರಂತಕ್ಕೆ ಒಳಗಾಗಿದೆ. ಮೇಲೇರುವಾಗ ವಿಮಾನದ ಹಿಂದಿನ ಭಾಗ ಮರವೊಂದಕ್ಕೆ ಬಡಿದ ತಕ್ಷಣ ತುಂಡಾಗಿದೆ ನಂತರ ವಿಮಾನ ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಛಿದ್ರವಾಗಿ ಬೆಂಕಿ ಹೊತ್ತಿಕೊಂಡಿದೆ.
ಸುಮಾರು 874 ಅಡಿಗಳಷ್ಟು ಎತ್ತರದಿಂದ ವಿಮಾನ ಕೆಳಗೆ ಬಿದ್ದಿದೆ.ದುರಂತದಲ್ಲಿ ಗುಜರಾತ್‌ನ ಮಾಜಿ ಸಿಎಂ ರೂಪಾಲಿ ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬೋಯಿಂಗ್ 787 ಮಾದರಿಯ ವಿಮಾನ ಇದಾಗಿದ್ದು,ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಗ್ರಮೆ ವ್ಯಕ್ತಪಡಿಸಿದ್ದು ಗುಜರಾತ್ ಸಿಎಂ ಜೊತೆ ಮಾತುಕತೆ ನಡೆಸಿದ್ದಾರೆ.
ಈ ವಿಮಾನದಲ್ಲಿ ಉದ್ಯಮಿಗಳು,ವಿದ್ಯಾರ್ಥಿಗಳು ಹೆಚ್ಚಾಗಿದ್ದರು ಎಂದು ಮೂಲಗಳು ತಿಳಿಸಿವೆ.ವಸತಿ ಪ್ರದೇಶದ ಬಾಲಕೀಯರ ಹಾಸ್ಟಲ್ ಮೇಲೆ ವಿಮಾನ ಬಿದಿದ್ದು ಅಲ್ಲಿದ್ದ ವಾಹನಗಳು ಸುಟ್ಟುಹೋಗಿದೆ .ಅಲ್ಲಿ ಕೂಡ ಹಲವರು ಸಾವಿಗೀಡಾಗಿದ್ದಾರೆ ಎಂದು ತಿಳಿಯಲಾಗಿದೆ.