ಯುವಜನ
ಅತಿಯಾಗಿ ಮೊಬೈಲ್ ನೋಡಬೇಡ ಎಂದು ತಾಯಿ ಬುದ್ಧಿವಾದ ಹೇಳಿದಕ್ಕೆ ಮನೆ ಬಿಟ್ಟು ಹೋದ ಬಾಲಕಿ ನಾಪತ್ತೆ

Views: 40
ಕಲಬುರಗಿ,-ಅತಿಯಾಗಿ ಮೊಬೈಲ್ ನೋಡಬೇಡ ಎಂದು ತಾಯಿ ಬೈಯ್ದು ಬುದ್ಧಿವಾದ ಹೇಳಿದಕ್ಕೆ ಬಾಲಕಿಯೊಬ್ಬಳು ಮನೆ ಬಿಟ್ಟು ಹೋದ ಘಟನೆ ಡಬರಾಬಾದ ಹತ್ತಿರದ ಎಸ್.ಎಂ.ಕೃಷ್ಣ ಕಾಲೋನಿಯಲ್ಲಿ ನಡೆದಿದೆ.
9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಮೊಬೈಲ್ ನೋಡುವುದರಲ್ಲಿ ಅತಿ ಹೆಚ್ಚು ಕಾಲ ಕಳೆಯುತ್ತಿದ್ದುದ್ದರಿಂದ ತಾಯಿ ಬೈಯ್ದು ಬುದ್ಧಿವಾದ ಹೇಳಿದ್ದರು. ಇಷ್ಟಕ್ಕೆ ಬಾಲಕಿ ಮನೆ ತೊರೆದು ಹೋಗಿದ್ದು, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಮತ್ತಿತರ ಕಡೆ ಬಾಲಕಿಯನ್ನು ಪಾಲಕರು ಹುಡುಕಾಡಿದರೂ ಬಾಲಕಿ ಪತ್ತೆಯಾಗಿಲ್ಲ. ಈ ಸಂಬಂಧ ಬಾಲಕಿಯ ಪಾಲಕರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.