ಸಾಂಸ್ಕೃತಿಕ

ಅಡಲ್ಟ್ ಫಿಲ್ಮ್​ ಸ್ಟಾರ್​ ಜೆಸ್ಸಿ ಜೇನ್ ಮತ್ತು ಬಾಯ್​ಫ್ರೆಂಡ್​ ಶವವಾಗಿ ಪತ್ತೆ

Views: 91

ನ್ಯೂಯಾರ್ಕ್: ವಯಸ್ಕ ಚಲನಚಿತ್ರಗಳ ತಾರೆ, ಅಮೆರಿಕದ ಜೆಸ್ಸಿ ಜೇನ್ ತಮ್ಮ 43ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಮಾದಕವಸ್ತು ಮಿತಿಮೀರಿದ ಸೇವನೆಯೇ ಇವರ ಸಾವಿಗೆ ಕಾರಣ ಎಂದು ಹೇಳಲಾಗಿದೆ.

ಸೌಂದರ್ಯ ಸ್ಪರ್ಧೆಯ ಸ್ಪರ್ಧಿಯಾಗಿದ್ದ ಜೆಸ್ಸಿ ಜೇನ್​ ಅವರು ಅಶ್ಲೀಲ ಚಲನಚಿತ್ರ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್‌ನ ಚಿತ್ರದಲ್ಲಿ ಅವರು ನಟಿಸಿದ್ದರು.

ಜೆಸ್ಸಿ ಜೇನ್ಸ್ ಬುಧವಾರ ಒಕ್ಲಹೋಮಾದ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಟ ಹಾಗೂ ಬಾಯ್​ ಫ್ರೆಂಡ್​ ಬ್ರೆಟ್ ಹ್ಯಾಸೆನ್ಮುಲ್ಲರ್ ಜೊತೆಯಲ್ಲಿ ಮನೆಯಲ್ಲಿ ಈಕೆ ಇದ್ದಳು. ಈಕೆಯ ಬಾಯ್​ ಫ್ರೆಂಡ್​ ಕೂಡ ಇದೇ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ.

ಬುಧವಾರ ಬೆಳಗ್ಗೆ ಜೇನ್ ಅವರ ಮೃತದೇಹ ಪತ್ತೆಯಾದ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸಿದರು ಎಂದು ಒಕ್ಲಹೋಮಾದ ಮೂರ್‌ನಲ್ಲಿರುವ ಮೂರ್ ಪೋಲೀಸ್ ಇಲಾಖೆಯ ಲೆಫ್ಟಿನೆಂಟ್ ಫ್ರಾನ್ಸಿಸ್ಕೊ ​​ಫ್ರಾಂಕೋ ತಿಳಿಸಿದ್ದಾರೆ. ಈ ಎರಡೂ ಸಾವುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಜೇನ್​ ಅವರು 2003 ರಲ್ಲಿ ವಯಸ್ಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ‘ಬೇವಾಚ್: ಹವಾಯಿಯನ್ ವೆಡ್ಡಿಂಗ್’ ನಲ್ಲಿ ಅವರ ಪಾತ್ರಗಳು ಖ್ಯಾತಿ ಪಡೆದವು.

ಜೆಸ್ಸಿ ಜೇನ್ ಜುಲೈ 16, 1980 ರಂದು ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿ ಸಿಂಥಿಯಾ ಆನ್ ಹೋವೆಲ್ ಎಂಬ ಹೆಸರು ಪಡೆದುಕೊಂಡು ಜನಿಸಿದರು. ಈಕೆಯ ಪೋಷಕರು ಟಿಂಕರ್ ಏರ್ ಫೋರ್ಸ್ ಬೇಸ್‌ನಲ್ಲಿ ಕೆಲಸ ಮಾಡುತ್ತಿದ್ದರು.

 

Related Articles

Back to top button