ಜನಮನ

ಅಗಸ್ಟ್ 10 ರಂದು ಬಸ್ರೂರು ಸ್ಪೋರ್ಟ್ಸ್ ಕ್ಲಬ್ (ರಿ.) ಬಸ್ರೂರು “ವಿಜಯ ಪಥ”

Views: 89

ಕನ್ನಡ ಕರಾವಳಿ ಸುದ್ದಿ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಬಸ್ರೂರು ಸ್ಪೋರ್ಟ್ಸ್ ಕ್ಲಬ್ (ರಿ.) ಬಸ್ರೂರು ಇವರ ಆಶ್ರಯದಲ್ಲಿ “ವಿಜಯ ಪಥ” ಬೃಹತ್ ಕಾರ್ಯಕ್ರಮ ದಿನಾಂಕ 10.08.2025ನೇ ರವಿವಾರ ಸಂಜೆ 4.00 ಗಂಟೆಗೆ ಬಸ್ರೂರು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ.

ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡುವ ಸೈನಿಕರ ಕಾರ್ಯ, ಬದುಕು ನಮ್ಮೆಲ್ಲರಿಗೂ ಮಾದರಿ ಮತ್ತು ಸ್ಪೂರ್ತಿದಾಯಕ, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತ ಯಶಸ್ಸು ಗಳಿಸಿ, ದೇಶದ ರಕ್ಷಣೆ, ಸುರಕ್ಷತೆ ನಮ್ಮೆಲ್ಲರ ಪ್ರಥಮ ಆದ್ಯತೆ ಆಗಬೇಕು. ಸಮಯ ಬಂದರೆ ದೇಶಕ್ಕಾಗಿ ಪ್ರಾಣವನ್ನೂ ಅರ್ಪಿಸುವ ದೇಶಭಕ್ತಿಯ ಭಾವ ಎಲ್ಲರಲ್ಲಿ ಬೆಳೆಯಬೇಕು. ದೇಶ ಉಳಿದಾಗ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ ಈ ಹಿನ್ನೆಲೆಯಲ್ಲಿ ತ್ರಿವಳಿ ವಿಜಯಾಚರಣೆ ಮತ್ತು ವೀರ ಯೋಧನಿಗೆ ಹುಟ್ಟೂರಿನ ಸ್ವಾಗತ, ಭಾರತೀಯ ಸೇನೆಯ ಮೂರು ರೋಮಾಂಚಕ ಘಟನೆಗಳ ಮೆಲುಕು ಕಾರ್ಗಿಲ್ ಯುದ್ಧ, ಪುಲ್ವಾಮಾ, ಸಿಂಧೂರ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡ ಸೈನಿಕರ ಗೌರವ ಪೂರ್ಣ ಉಪಸ್ಥಿತಿಯಲ್ಲಿ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಇದೀಗ ನಿವೃತ್ತಿ ಪಡೆದು ಹುಟ್ಟೂರಿಗೆ ಮರಳುತ್ತಿರುವ ನಮ್ಮೂರ ಹೆಮ್ಮೆಯ ಸೈನಿಕ ಬಸ್ರೂರು ದೀಪಕ್ ಕುಮಾರ್  ಅವರಿಗೆ ಹುಟ್ಟೂರ ಸನ್ಮಾನ

ಯೋಧರೊಂದಿಗೆ ಬೃಹತ್ ಶೋಭಾಯಾತ್ರೆ ಮಧ್ಯಾಹ್ನ 2.30ಕ್ಕೆ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿಯಿಂದ ಬಸ್ರೂರು ಬಸ್ ನಿಲ್ದಾಣದವರೆಗೆ ನಡೆಯಲಿದೆ ಎಂದು ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

Back to top button