ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ Phd ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: HOD ಮೇಲೆ ಆರೋಪ..?

Views: 28
ಅಕ್ಕಮಹಾದೇವಿ ವಿವಿಯಲ್ಲಿ ಎಂಬಿಎ ಮುಗಿಸಿರುವ ಪ್ರಿಯಾಂಕ ಎನ್ನುವ ವಿದ್ಯಾರ್ಥಿನಿ ಪಿಎಚ್ಡಿ ಓದುತ್ತಿದ್ದಾರೆ. ವ್ಯವಹಾರ ಅಧ್ಯಯನದ ಮುಖ್ಯಸ್ಥ ಪ್ರೊ ಮಲ್ಲಿಕಾರ್ಜುನ ಅವರ ಮೇಲೆ ಈ ಆರೋಪ ಕೇಳಿ ಬಂದಿದೆ.
ಪಿಎಚ್ಡಿ ಕಂಪ್ಲೀಟ್ ಆಗ್ಬೇಕು ಅಂದ್ರೆ ನಾಲ್ಕೈದು ಲಕ್ಷ ಹಣ ಕೊಡ್ಬೇಕು. ಇಲ್ಲ ಮಂಚ ಹತ್ತಬೇಕು ಅಂತ ಪ್ರೊ.ಮಲ್ಲಿಕಾರ್ಜುನ ಕಿರುಕುಳ ಕೊಟ್ಟಿದ್ದಾರೆ ಅಂತ ಸಂಶೋಧನಾ ವಿದ್ಯಾರ್ಥಿನಿ ಆರೋಪಿಸಿದ್ದಾರೆ.
ಕಳೆದ ಆರು ತಿಂಗಳಿಂದ ವ್ಯವಹಾರ ಅಧ್ಯಯನದ ಮುಖ್ಯಸ್ಥ ಪ್ರೊ ಮಲ್ಲಿಕಾರ್ಜುನ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರಂತೆ, ಪಿಎಚ್ಡಿ ಕಂಪ್ಲೀಟ್ ಆಗ್ಬೇಕಾದ್ರೆ ನನಗೆ ಸಹಕರಿಸು, ಇಲ್ಲ ಹಣ ಕೊಡು ಅಂತ ಪೀಡಿಸುತ್ತಿದ್ದಾರಂತೆ ಎನ್ನುವುದು ವಿದ್ಯಾರ್ಥಿನಿಯ ಆರೋಪ.
ಆದರೆ ವಿದ್ಯಾರ್ಥಿನಿ ಈ ಬೆದರಿಕೆಗಳಿಗೆ ಅಂಜದೇ ಇದ್ದಾಗ ಪ್ರೊ ಮಲ್ಲಿಕಾರ್ಜುನ ಅಶ್ಲೀಲ ಪದಗಳಿಂದ ನಿಂದನೆ ಮಾಡೋದು, ತನ್ನ ರೂಮ್ನಲ್ಲಿ ಕರೆಸಿ ಕೆಟ್ಟದಾಗಿ ನೋಡಿದ್ದರಂತೆ ಇದರಿಂದ ಬೇಸತ್ತಿದ್ದ ವಿದ್ಯಾರ್ಥಿನಿ ಆತಹ್ಮತ್ಯೆಗೂ ಯತ್ನಿಸಿರೋದಾಗಿ ತನ್ನ ಅಳಲು ತೋಡಿಕೊಂಡಿದ್ದಾಳೆ.ಕೂಡಲೇ ಪ್ರೊಫೆಸರ್ನನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾಳೆ.
ಮಹಿಳಾ ವಿವಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದೇ ಇರೋದು ನಿಜಕ್ಕೂ ಆತಂಕಕಾರಿ ಅಂತ ಸ್ಥಳೀಯರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಪ್ರೊಪೆಸರ್ ವಿರುದ್ಧ ಸಾಲು ಸಾಲು ಆರೋಪ ಮಾಡಿರುವ ವಿದ್ಯಾರ್ಥಿನಿ ಸಿಎಂ, ಉನ್ನತ ಶಿಕ್ಷಣ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೂ ದೂರು ನೀಡಿದ್ದಾರೆ.ಈಗಾಗಲೇ ಪ್ರೊಪೆಸರ್ ಅವರನ್ನು ಅಮಾನತು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯವರು ಪ್ರತಿಭಟಿಸಿದ್ದಾರೆ.