ಇತರೆ
ಅಂಗನವಾಡಿ ಮುಗಿಸಿ ಅಜ್ಜಿಯೊಂದಿಗೆ ಮನೆಗೆ ಬರುತ್ತಿದ್ದ ವೇಳೆ ಟಿಪ್ಪರ್ ಹರಿದು ಬಾಲಕಿ ಸಾವು

Views: 0
ದಾವಣಗೆರೆ ಹಳೆ ಕುಂದು ವಾಡದಲ್ಲಿ ಬಾಲಕಿಯ ಮೈ ಮೇಲೆ ಟಿಪ್ಪರ್ ಹರಿದು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಗಣೇಶ್ ಅವರ ಪುತ್ರಿ ಚಿರಸ್ವಿ ಸಾವನಪ್ಪಿದ ಅಂಗನವಾಡಿ ಪುಟ್ಟ ಬಾಲಕಿ
ಅಂಗನವಾಡಿ ತರಗತಿ ಮುಗಿಸಿಕೊಂಡು ಮಧ್ಯಾಹ್ನ ತನ್ನ ಅಜ್ಜಿಯೊಂದಿಗೆ ಮನೆಗೆ ಬರುತ್ತಿದ್ದ ವೇಳೆ ಟಿಪ್ಪರ್ ಚಾಲಕನ ಅಜಾಗರೂಕತೆಗೆ ಪುಟ್ಟ ಬಾಲಕಿ ಮೈ ಮೇಲೆ ಹರಿದು ಬಲಿ ತೆಗೆದುಕೊಂಡಿದೆ.
ಟಿಪ್ಪರ್ ಚಾಲಕ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ ಸೇರಿದ ಸ್ಥಳೀಯರು ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿ, ಟಿಪ್ಪರ್ ಚಾಲಕನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದ್ದಾರೆ.