ಯುವಜನ

SSLC, PUC, ITI, ಆದವರಿಗೆ ಸರ್ಕಾರಿ ಹುದ್ದೆಗಳು: ಯಾವ್ಯಾವ ಹುದ್ದೆ ಖಾಲಿ ಇವೆ, ಯಾರು ಯಾರು ಅರ್ಜಿ ಸಲ್ಲಿಸಬಹುದು…

Views: 542

ಕನ್ನಡ  ಕರಾವಳಿ ಉದ್ಯೋಗ ಮಾಹಿತಿ 

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಇಲಾಖೆಯು ಹಿರಿಯ ಸೆಕ್ಷನ್ ಇಂಜಿನಿಯರ್, ಟೆಕ್ನಿಷೀಯನ್, ಸಹಾಯಕ ಲೋಕೋ ಪೈಲಟ್, ಸ್ಟೇಷನ್ ಮಾಸ್ಟರ್ ಸೇರಿದಂತೆ ಇತರೆ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ.

ಹುದ್ದೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆ, ಕೊನೆ ದಿನಾಂಕ, ಅರ್ಜಿ ಶುಲ್ಕ, ವಯಸ್ಸು, ಯಾವ ರೀತಿ ಅಪ್ಲೇ ಮಾಡುವುದು, ಎಷ್ಟು ಹುದ್ದೆಗಳು, ಯಾವ ರೀತಿ ಪರೀಕ್ಷೆಗಳು ಇರುತ್ತಾವೆ, ವೇತನ ಶ್ರೇಣಿ, ಹುದ್ದೆಯ ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ

ಹಿರಿಯ ಸೆಕ್ಷನ್ ಇಂಜಿನಿಯರ್ ಹುದ್ದೆಗಳು 10  BE/B.Tec in EE/ಮೆಕ್ಯಾನಿಕಲ್ ಇಂಜಿನಿಯರ್ ಆಗಿರಬೇಕು.

ಟೆಕ್ನಿಷೀಯನ್ 35 ಹುದ್ದೆಗಳು 10ನೇ ತರಗತಿ ಅಥವಾ ಐಟಿಐ ಆಗಿರಬೇಕು.

ಸಹಾಯಕ ಲೋಕೋ ಪೈಲಟ್ 15  10ನೇ ತರಗತಿ ಅಥವಾ ಐಟಿಐ ಆಗಿರಬೇಕು.

ಟ್ರ್ಯಾಕ್ ನಿರ್ವಾಹಕ 35 ಹುದ್ದೆಗಳು  10ನೇ ತರಗತಿ  ಪೂರ್ಣಗೊಳಿಸಿರಬೇಕು.

ಸ್ಟೇಷನ್ ಮಾಸ್ಟರ್ ಹುದ್ದೆಗಳು 10 ಪದವಿ ಆಗಿರಬೇಕು

ಗೂಡ್ಸ್ ಟ್ರೈನ್ ಮ್ಯಾನೇಜರ್ 05  ಪದವಿ ಆಗಿರಬೇಕು

ಪಾಯಿಂಟ್ ಮ್ಯಾನ್ 60  10ನೇ ತರಗತಿ ಪಾಸ್ ಆಗಿರಬೇಕು

ESTM 15 ಹುದ್ದೆಗಳು 10ನೇ ತರಗತಿ, ಐಟಿಐ, ಸೆಕೆಂಡ್ ಪಿಯುಸಿ ಆಗಿರಬೇಕು

ಕಮರ್ಷಿಯಲ್ ಸೂಪರ್ವೈಸರ್ 05  ಯಾವುದೇ ಪದವಿಯನ್ನು ಪಡೆದಿರಬೇಕು.

ಒಟ್ಟು 190 ಹುದ್ದೆಗಳಿದ್ದು ಇವುಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 36 ವರ್ಷದೊಳಗಿನವರು ಆಗಿರಬೇಕು. ಪರೀಕ್ಷೆಯು ಕಂಪ್ಯೂಟರ್ ಬೇಸ್ ಟೆಸ್ಟ್ ಇರುತ್ತದೆ. ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಸಂದರ್ಶನ ಮಾಡಿ ಬಳಿಕ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ    ಅರ್ಜಿ ಸಲ್ಲಿಸುವವರು  885 ರೂಪಾಯಿಗಳನ್ನು ಪಾವತಿಸಬೇಕು.ಇದನ್ನು  ಆನ್ಲೈನ್ ಮೂಲಕವೇ ಇಲಾಖೆಗೆ ಪೇ ಮಾಡಬೇಕು.

ಹುದ್ದೆಗಳಿಗೆ ತಿಂಗಳಿಗೆ ಸಂಬಳ 18,000 ರೂ.ಗಳಿಂದ 44,900 ರೂ.ಗಳ ವರೆಗೆ ಇರುತ್ತದೆ.

ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವವರು ಈ ಲಿಂಕನ್ನು ಕ್ಲಿಕ್ ಮಾಡಿ- https://konkanrailway.com/pages/viewpage/current_notifications

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 16 ಸೆಪ್ಟೆಂಬರ್ 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6 ಅಕ್ಟೋಬರ್ 2024

Related Articles

Back to top button