ಜನಮನ

ಸಂಸ್ಕಾರಗಳ ರಕ್ಷಕ, ಹಿರಿಯ ಸಂಪ್ರದಾಯವಾದಿ: ವಕ್ವಾಡಿ ರಾಮ ಶೆಟ್ಟಿಗಾರ

Views: 1

ವಕ್ವಾಡಿ ರಾಮ ಶೆಟ್ಟಿಗಾರ ಸಂಪ್ರದಾಯ ಕೃಷಿಕ, ಗಿಡಮೂಲಿಕೆ ತಜ್ಞ ,ಕುಣತÂ ಭಜನೆಗಾರ ಪುರಾಣ ಗೃಂಥಗಳ ಅಧ್ಯಯನದಿಂದ ವಿದ್ವತ್ತು ಪಡೆದು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿರುವ ಹಿರಿಯ ಧಾರ್ಮಿಕ ಸಂಪ್ರದಾಯವಾದಿ ವಕ್ವಾಡಿ ರಾಮ ಶೆಟ್ಟಿಗಾರರು ೧೯೨೮ ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ವಕ್ವಾಡಿಯಲ್ಲಿ ೬ ಮತ್ತು ೭ ನೇ ತರಗತಿಯ ಶಿಕ್ಷಣವನ್ನು ಕೋಟೇಶ್ವರ ಸರ್ಕಾರಿ ಶಾಲೆಯಲ್ಲಿ ಕನ್ನಡದ ಜೊತೆಗೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಯನ್ನು ಅಧ್ಯಯನ ಮಾಡಿದ್ದಾರೆ. ಇವರಿಗೆ ೩ ಜನ ಪುತ್ರರರು ಮತ್ತು ೩ ಜನ ಪತ್ರಿಯರಿದ್ದಾರೆ.

ಉನ್ನತ ಧಾರ್ಮಿಕ ಶಿಕ್ಷಣ ಅಧ್ಯಯನ : ಗೋಕರ್ಣದ ಗುರುಕುಲದಲ್ಲಿ ಋಗ್ವೇದ, ಯಜರ್ವೇದ ಸಾಮವೇದ ಜತೆಯಲ್ಲಿ ಜಾತಕ ಪ್ರಶ್ನೆ, ಲಗ್ನ ಮಹೂರ್ತದ ಬಗ್ಗೆ ಅಧ್ಯಯನ ಮಾಡಿದರು. ೧೯೬೬ ರಲ್ಲಿ ತಿರುಪತಿಯಲ್ಲಿ ಮುದ್ರಾಧಾರಣೆ ಮಾಡಿಕೊಂಡು ‘ ದಾಸ` ರಾಗಿ ಅನುಗೃಹ ಪಡೆದುಕೊಂಡು ವಿಧಿವತ್ತಾಗಿ ದೇವತಾ ಕಾರ್ಯಗಳನ್ನು ನಡೆಸುವ ಬಗ್ಗೆ ಅನುಮತಿ ಪಡೆದುಕೊಂಡು ಬಂದು ಕುಂಜಾಲು ಶ್ರೀ ಆನಂತ ಶೆಟ್ಟಿಗಾರ ಇವರಿಂದ ತುಳಸಿ ಕಟ್ಟೆ ವಸಂತ ಪೂಜೆ ಮಾಡುವ ದಾರ್ಮಿಕ ವಿಧಿ-ವಿಧಾನದ ಬಗ್ಗೆ ತರಭೇತಿ ಪಡೆದು, ಸಾವಿರ ಹಣ್ಣಿನ ವಸಂತ ೬೦೦ ಕ್ಕೂ ಹೆಚ್ಚು ತುಳಸಿಕಟ್ಟೆ ವಸಂತ ಪೂಜೆ ಮಾಡಿದ ಕೀರ್ತಿ ಇವರದು. ವೇದಗಳ ಅಭ್ಯಾಸದ ಜೊತೆಗೆ ರಾಮಾಯಣ, ಮಹಾಭಾರತ, ಪುರಾಣ ಗೃಂಥಗಳ ಅಭ್ಯಾಸ ಮಾಡಿ ಭಗದ್ಗೀತೆಯ ೧೮ ಅದ್ಯಾಯಗಳನ್ನು ೮ ರಿಂದ ೧೦ ಭಾರಿ ಅಧ್ಯಯನ ಮಾಡಿದ್ದಾರೆ. ನೆಯ್ಗೆ ವ್ರತ್ತಿ ಶಿಕ್ಷಕರಾಗಿ ಸೇವೆ : ೧೯೪೬ ರಲ್ಲಿ ಸರ್ಕಾರಿ ನೆಯ್ಗೆ ವೃತ್ತಿ ಶಿಕ್ಷಕರಾಗಿ ದಿನಕ್ಕೆ ೧ ರೂಪಾಯಿಯಂತೆ ಸಂಬಳ ಪಡೆದು ೧ ತಿಂಗಳು ಸೇವೆ ಸಲ್ಲಿಸಿ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರಿAದ ಶಿಕ್ಷಕ ವೃತ್ತಿಗೆ ರಾಜಿನಾಮೆ ಸಲ್ಲಿಸಿದ್ದರು. ೧೯೭೫ ರಲ್ಲಿ ಚಿಟ್ಟೂರು ಗ್ರಾಮೀಣ ನೇಕಾರಿಕೆ ತರಭೇತಿ ಸಂಸ್ಥೆಯಲ್ಲಿ ನೆಯ್ಗೆ ತರಬೇತಿ ಪಡೆದು ಹಂಗಾರಕಟ್ಟೆ ಬಾಳಕುದ್ರು ಮಠದಲ್ಲಿ ನೆಯ್ಗೆ ವೃತ್ತಿಯನ್ನು ಆರಂಭಿಸಿ ಖಾದಿ ಬಟ್ಟೆಯನ್ನು ತಯಾರಿಸಿ ಉತ್ತಮ ನೆಯ್ಗೆಗಾಗಿ ಪ್ರಶಂಸೆ ಪಡೆದಿದ್ದಾರೆ. ಗಿಡಮೂಲಿಕೆ ತಜ್ಞರಾಗಿ : ಕೃಷಿ ಚಟುವಟಿಕೆಯ ಜೊತೆಗೆ ಜಾನುವಾರುಗಳಿಗೆ ಎಲ್ಲಾ ತರದ ಗಿಡಮೂಲಿಕೆ ಔಷಧ ನೀಡುತ್ತಿದ್ದರು. ವಿಷದ ಹಾವು ಕಡಿತಕ್ಕೆ ಒಳಗಾದ ೧೦ ರಿಂದ ೧೨ ಜನರಿಗೆ ಗಿಡ ಮೂಲಿಕೆ ಔಷಧ ನೀಡಿ ಪುನರ್‌ಜನ್ಮ ನೀಡಿದ್ದಾರೆ. ಆಗಿನ ಕಾಲದ ದೊಡ್ಡ ವ್ಯಾದಿಗಳಾದ ರಾಣಿ ಬಾಹು, ಅರಸ್ ಬಾಹುಗಳಿಗೆ ಔಷಧ ನೀಡುತ್ತಿದ್ದರು.

ಧಾರ್ಮಿಕ ಮತ್ತು ಸಂಸ್ಕಾರಗಳ ರಕ್ಷಕರಾಗಿ: ಗಂಡು ಹೆಣ್ಣಿನ ಮದುವೆ ಸಂಬAಧಕ್ಕೆ ಮಾತುಕತೆ ನಡೆಸಿ, ನಿಶ್ವಿತಾರ್ಥ, ಮದುವೆ ಕಾರ್ಯವನ್ನು ವಿಧಿವತ್ತಾಗಿ ಮಾಡಿಸಿರುತ್ತಾರೆ. ೫೦೦ ಕ್ಕೂ ಹೆಚ್ಚು ಶವ ಸಂಸ್ಕಾರಗಳಲ್ಲಿ ಭಾಗವಹಿಸಿ, ಪವಿತ್ರ ಕ್ಷೇತ್ರದಲ್ಲಿ ಮರಣೋತ್ತರ ವಿಧಿ-ವಿಧಾನಗಳನ್ನು ನಡೆಸಿರುತ್ತಾರೆ. ಸನ್ಮಾನ ಪುರಸ್ಕಾರ : ಉತ್ತಮ ಖಾದಿ ಬಟ್ಟೆ ನೆಯ್ಗೆಗಾಗಿ ಬಾಳ ಕುದ್ರು ಮಠದಲ್ಲಿ ಪುರಸ್ಕಾರ, ವಕ್ವಾಡಿ ಯುವಶಕ್ತಿ ಯುವಕ ಮಂಡಲದವರಿAದ ಧಾರ್ಮಿಕ ಸಂಪ್ರದಾಯಗಳ ರಕ್ಷಣೆಗಾಗಿ ಸಾರ್ವಜನಿಕ ಸನ್ಮಾನ ಮತ್ತು ಪುರಸ್ಕಾರ, ಸೂರಾಲು ಜವಳಿ ವ್ಯಾಪಾರಿ ರಾಮ ಶೆಟ್ಟಿಗಾರ ಇವರಿಂದ ಉತ್ತಮ ವಿಧಿ-ವಿಧಾನದ ತುಳಸಿ ಪೂಜೆಗಾಗಿ ಪುರಸ್ಕಾರ, ತಿರುಪತಿಯಲ್ಲಿ ದಾಸರಾಗಿ ಅನುಗೃಹ ನೀಡಿ ಪುರಸ್ಕಾರ, ಬಾರ್ಕೂರು ಶ್ರೀ ಬೃಹ್ಮಲಿಂಗವೀರಭದ್ರ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸೇವಾ ಸಂಘ, ಕುಂದಾಪುರ ಶನೀಶ್ವರ ದೇವಸ್ಥಾನ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಸನ್ಮಾನ ನೀಡಿದ್ದಾರೆ.

ಬಾರ್ಕೂರು ಕುಲ ದೇವಸ್ಥಾನದ ಕೂಡು ಕಟ್ಟಿಗೆ ಸೇರಿದ ಹಿರಿಯರಾಗಿದ್ದು, ಆಗಿನ ಕಾಲದ ಮೊಕ್ತೇಸರ ಶಿವ ಶೆಟ್ಟಗಾರ ಕಾಲದಿಂದಲೂ ೭೫ ವರ್ಷಗಳ ಕಾಲ ಮತ್ತು ಕಲ್ಯಾಣಪುರ ದೇವಸ್ಥಾನದಲ್ಲಿಯೂ ಸಕ್ರೀಯರಾಗಿದ್ದಾರೆ. ೯೪ ವರ್ಷದ ವಕ್ವಾಡಿ ರಾಮ ಶೆಟ್ಟಿಗಾರ ಅವರಿಗೆ ಸುಖ, ಶಾಂತಿ, ನೆಮ್ಮದಿಯ ಜೊತೆಗೆ ದೀರ್ಘಾಯ್ಯುಷ್ಯ ಪ್ರಾಪ್ತಿಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ. ಸಂದರ್ಶಿತ ವರದಿ: ಸುಧಾಕರ ವಕ್ವಾಡಿ

Related Articles

Back to top button