ಸಾಂಸ್ಕೃತಿಕ

IPS ಅಧಿಕಾರಿ ಕಲ್ಯಾಣಿ ಸಿಂಗ್ ಖ್ಯಾತಿಯ ನಟಿ ಕವಿತಾ ಚೌಧರಿ ನಿಧನ

Views: 61

ಹಿರಿಯ ನಟಿ ಕವಿತಾ ಚೌಧರಿ (67) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ದೂರದರ್ಶನದ ಉಡಾನ್‌ನಲ್ಲಿ ಐಪಿಎಸ್ ಅಧಿಕಾರಿ ಕಲ್ಯಾಣಿ ಸಿಂಗ್ ಪಾತ್ರದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದರು. ಅಮೃತಸರದ ಪಾರ್ವತಿ ದೇವಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ.

ಇಂದು ನಟಿ ಕವಿತಾ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಬಳಿಕ ಕವಿತಾ ಅವರು ಯುವರ್ ಆನರ್, ಅಪ್ರಾದಿ ಕೌನ್ ಮತ್ತು ಐಪಿಎಸ್ ಡೈರೀಸ್ ನಂತಹ ಕಾರ್ಯಕ್ರಮಗಳಲ್ಲಿ ಅಭಿನಯಿಸಿದ್ದಾರೆ. 1980 ಮತ್ತು 1990ರ ದಶಕಗಳಲ್ಲಿ ದೂರದರ್ಶನದಲ್ಲಿ ಹಲವಾರು ಟಿವಿ ಶೋಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಆ ಕಾರ್ಯಕ್ರಮವು 1989ರಿಂದ 1991ರವರೆಗೆ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ತದ ನಂತರ ಕೋವಿಡ್-19 ಸಮಯದಲ್ಲಿ ದೂರದರ್ಶನದಲ್ಲಿ ಇದನ್ನು ಮರುಪ್ರಸಾರ ಮಾಡಲಾಗಿತ್ತು. ನಟಿ ಕವಿತಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹಲವು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

Related Articles

Back to top button