ರಾಜಕೀಯ

ಮತ್ತೆ ಪ್ರಧಾನಿಯಾದರೆ 3ನೇ ಅತಿ ದೊಡ್ಡ ಆರ್ಥಿಕತೆ ದೇಶವಾಗಿ ಭಾರತ:ಪ್ರಧಾನಿ ಮೋದಿ ವಿಶ್ವಾಸ

Views: 0

ಭಾರತ ದೇಶದ ಜನರು ಎನ್‌ಡಿಎಗೆ ಅಧಿಕಾರ ನೀಡಿದಾಗ ಹಾಗೂ 2014ರಲ್ಲಿ ತಾವು ಭಾರತದ ಪ್ರಧಾನ ಮಂತ್ರಿ ಆದಾಗ ದೇಶದ ಆರ್ಥಿಕತೆಯು ವಿಶ್ವ ಮಟ್ಟದಲ್ಲಿ 10ನೇ ಸ್ಥಾನದಲ್ಲಿ ಇತ್ತು. ನಂತರದ ದಿನಗಳಲ್ಲಿ 9ನೇ, 8ನೇ, 7ನೇ ಹಾಗೂ 6ನೇ ಸ್ಥಾನಕ್ಕೆ ಏರಿದಾಗ ಈ ಕುರಿತಾಗಿ ಯಾರೂ ಮಾತನಾಡಲಿಲ್ಲ. ಇದೀಗ ಭಾರತ 5ನೇ ಸ್ಥಾನದಲ್ಲಿದೆ. ತಾವು ಮತ್ತೆ ಪ್ರಧಾನಿಯಾದರೆ 3ನೇ ಸ್ಥಾನಕ್ಕೆ ಏರಲಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಧಾನಿಯಾಗಿ ನನ್ನ 3ನೇ ಅಧಿಕಾರಾವಧಿಯಲ್ಲಿ ಭಾರತ ದೇಶವು ಇಡೀ ವಿಶ್ವದಲ್ಲೇ 3ನೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಿ ಹೊರ ಹೊಮ್ಮಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಧ್ಯ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರ ಕಣದಲ್ಲಿ ಪ್ರಧಾನಿ ಮೋದಿ ಈ ಆಶ್ವಾಸನೆ ನೀಡಿದ್ದಾರೆ. ಈ ಮೂಲಕ ವಿಧಾನಸಭಾ ಚುನಾವಣಾ ಪ್ರಚಾರ ಮಾತ್ರವಲ್ಲ, ಲೋಕಸಭಾ ಚುನಾವಣಾ ಪ್ರಚಾರಕ್ಕೂ ಪ್ರಧಾನಿ ಮೋದಿ ಪರೋಕ್ಷವಾಗಿ ಮತ ಯಾಚನೆ ಮಾಡಿದ್ದಾರೆ.

ಮಧ್ಯ ಪ್ರದೇಶದ ದಮೋಹ್ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿ, ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟ ಮುಂದುವರೆಸುವುದಾಗಿಯೂ ಸಮಾವೇಶದಲ್ಲಿ ಸೇರಿದ್ದ ಜನ ಸಮೂಹಕ್ಕೆ ಭರವಸೆ ನೀಡಿದ್ಧಾರೆ.

2014ರಲ್ಲಿ ಭಾರತ ದೇಶವು ವಿಶ್ವದಲ್ಲೇ 10ನೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಿತ್ತು. ಆದರೆ ಇಂದು ವಿಶ್ವದಲ್ಲೇ 5ನೇ ಅತಿ ದೊಡ್ಡ ಆರ್ಥಿಕತೆಯ ದೇಶ ಆಗಿದೆ. ಭಾರತ ದೇಶವನ್ನು 200 ವರ್ಷಗಳ ಕಾಲ ಆಳಿದ, ಭಾರತೀಯರನ್ನು ಗುಲಾಮಗಿರಿಗೆ ತಳ್ಳಿದ ಬ್ರಿಟನ್ ದೇಶವನ್ನು ಇಂದು ಭಾರತ ದೇಶ ತನ್ನ ಆರ್ಥಿಕತೆಯಲ್ಲಿ ಹಿಂದಿಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Related Articles

Back to top button
error: Content is protected !!