ಶಿಕ್ಷಣ
ಮಂಗಳೂರು:ಸ್ಮೃತಿ ಎಸ್. ಶೆಟ್ಟಿಗಾರ್ ಎಂ.ಸಿ.ಎ.ಯಲ್ಲಿ ಪ್ರಥಮ ರ‍್ಯಾಂಕ್

Views: 2
ಬೆಂಗಳೂರಿನ ರಾಮಯ್ಯ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಮಂಗಳೂರಿನ ಕು.ಸ್ಮೃತಿ ಎಸ್. ಶೆಟ್ಟಿಗಾರ್ 2022-23ನೇ ಸಾಲಿನ MCA(ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಪ್ಲಿಕೇಶನ್ಸ್ ) ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿರುತ್ತಾಳೆ.
ಈಕೆ ಮಂಗಳೂರಿನ ಎಸ್.ಡಿ.ಎಂ. ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಬಿ.ಸಿ.ಎ. ಪದವಿಯಲ್ಲಿ ಏಳನೇ ರ‍್ಯಾಂಕ್ ಪಡೆದಿದ್ದಳು.
ಕು.ಸ್ಮೃತಿ ಎಸ್. ಶೆಟ್ಟಿಗಾರ್ ಮಂಗಳೂರಿನ ಶ್ರೀ ಬಿ. ಶುಭಕರ ಶೆಟ್ಟಿಗಾರ ಮತ್ತು ಶ್ರೀಮತಿ ಸೌಮ್ಯ ಶುಭಕರ ದಂಪತಿಗಳ ಪುತ್ರಿ ಹಾಗು ಪದ್ಮಶಾಲಿ ಪತ್ರಿಕೆಯ ಮಂಗಳೂರು ಪ್ರತಿನಿಧಿ ಶ್ರೀ ಬಿ.ಎನ್.ಹರೀಶ್ ಬೋಳೂರ್ ಇವರ ಮೊಮ್ಮಗಳು.