ಧಾರ್ಮಿಕ

ದೇಶದಲ್ಲೇ ಅತ್ಯಂತ ಶ್ರೀಮಂತ ಮಂಬೈ ಗಣೇಶ: ಅಲಂಕಾರಕ್ಕೇ 69 ಕೆ.ಜಿ. ಚಿನ್ನ, 336 ಕೆ.ಜಿ. ಬೆಳ್ಳಿ; ಇನ್ಶೂರೆನ್ಸ್​ಗೆ 360 ಕೋಟಿ ರೂಪಾಯಿ!

Views: 1

ಮುಂಬೈ: ಗಣೇಶ ಚತುರ್ಥಿ ದಿನ ದೇಶಾದ್ಯಂತ ಹಲವೆಡೆ ನಾನಾ ರೀತಿಯ ಗಣೇಶನನ್ನು ಕೂರಿಸುತ್ತಾರೆ. ಆ ಪೈಕಿ ಈತ ಅಂತ್ಯಂತ ಶ್ರೀಮಂತ ಗಣೇಶ. ಏಕೆಂದರೆ ಈ ಗಣೇಶನ ಅಲಂಕಾರಕ್ಕೇ 69 ಕೆ.ಜಿ. ಚಿನ್ನ ಹಾಗೂ 336 ಕೆ.ಜಿ. ಬೆಳ್ಳಿ ಬಳಸಲಾಗಿದೆ.

ಮುಂಬೈನ ಅತ್ಯಂತ ದೊಡ್ಡ ಗಣೇಶ ಎನ್ನಲಾದ ಕಿಂಗ್ಸ್​ ಸರ್ಕಲ್​​ನ ಈ ಗಣಪತಿಗೆ ಹೀಗೆ ಚಿನ್ನ-ಬೆಳ್ಳಿಯಲ್ಲಿ ಭರ್ಜರಿಯಾಗಿ ಅಲಂಕಾರ ಮಾಡಲಾಗಿದೆ. ಜಿಎಸ್​​ಬಿ ಸೇವಾ ಮಂಡಲದವರು ಅದ್ಧೂರಿಯಾಗಿ ವರ್ಷಂಪ್ರತಿ ಆಚರಿಸುವ ಈ ಗಣೇಶ ಉತ್ಸವ ಪ್ರಸಿದ್ಧಿ ಪಡೆದಿದ್ದು, ಪ್ರತಿ ವರ್ಷವೂ ದೇಶದ ಗಮನ ಸೆಳೆಯುತ್ತದೆ.

ಈ ಗಣೇಶನಿಗೆ ವೈಭವೋಪೇತ ಅಲಂಕಾರ ಮಾಡಲಾಗುತ್ತಿದ್ದು, ಈ ಸಲ ಅಲಂಕಾರಕ್ಕೆಂದೇ 69 ಕೆ.ಜಿ. ಚಿನ್ನ ಹಾಗೂ 336 ಕೆ.ಜಿ. ಬೆಳ್ಳಿ ಬಳಸಲಾಗಿದೆ. ದುಬಾರಿ ಅಲಂಕಾರ ಮತ್ತಿತರ ಕಾರಣಗಳಿಂದಾಗಿ ಈ ಗಣೇಶನಿಗೆ ಪ್ರತಿವರ್ಷ ವಿಮೆ ಕೂಡ ಮಾಡಿಸಲಾಗಿದ್ದು, ಈ ಬಾರಿಯ ವಿಮೆ ಮೊತ್ತವೇ 360 ಕೋಟಿ ರೂಪಾಯಿ. ಕಳೆದ ವರ್ಷ 316 ಕೋಟಿ ರೂ. ವಿಮೆ ಮಾಡಿಸಲಾಗಿತ್ತು. ಈ ಸಲ ಸೆ.19ರಿಂದ 23ರವರೆಗೂ ಇಲ್ಲಿ ಗಣೇಶ ಚತುರ್ಥಿ ಉತ್ಸವ ಆಚರಣೆ ಆಗಲಿದೆ.

Related Articles

Back to top button
error: Content is protected !!