ಇತರೆ

ಚೆನ್ನಾಗಿ ಓದು ಎಂದು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ

Views: 0

ಚೆನ್ನಾಗಿ ಓದು ಎಂದು ಬುದ್ದಿವಾದ ಹೇಳಿದ್ದಕ್ಕೆ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಬಳಿ ನಡೆದಿದೆ.

ಕಾವೇರಿ( 17) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ

ಪ್ರತಿದಿನ ತಪ್ಪದೆ ಕಾಲೇಜಿಗೆ ಹೋಗಿ ಚೆನ್ನಾಗಿ ಓದಬೇಕು ಎಂದು ಪೋಷಕರು ವಿದ್ಯಾರ್ಥಿಗೆ ಬೈದು ಬುದ್ಧಿವಾದ ಹೇಳಿದ್ದಾರಂತೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ವಿದ್ಯಾರ್ಥಿನಿ, ದುಡುಕಿನ ನಿರ್ಧಾರ ಮಾಡಿಕೊಂಡಿದ್ದಾಳೆ.

ರಾತ್ರಿ ಎಲ್ಲರೂ ನಿದ್ರೆಯಲ್ಲಿರುವಾಗ  ಮನೆಯಿಂದ ಹೊರಹೋದ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Related Articles

Back to top button
error: Content is protected !!