ಲಾಡ್ಜ್ನಲ್ಲಿ ವಾಗ್ವಾದ ವೇಳೆ ಪ್ರಿಯಕರ ಕಿಟಕಿಯಿಂದ ಕೆಳಗೆ ತಳ್ಳಿ ಪ್ರೇಯಸಿಯ ಹತ್ಯೆ!
Views: 12
ಕನ್ನಡ ಕರಾವಳಿ ಸುದ್ದಿ:ಲಾಡ್ಜ್ ವೊಂದರಲ್ಲಿ ವಾಗ್ವಾದ ನಡೆಯುತ್ತಿದ್ದ ವೇಳೆ ಸ್ನೇಹಿತ ತಳ್ಳಿದ ಪರಿಣಾಮ ಆಯತಪ್ಪಿ ಕಿಟಕಿಯಿಂದ ಕೆಳಗೆ ಬಿದ್ದು 23 ವರ್ಷದ ಯುವತಿ ಮೃತಪಟ್ಟಿದ್ದಾರೆ.
ಮೃತಳನ್ನು ಹಾಸನ ಮೂಲದ ಐಶ್ವರ್ಯ ಎಂದು ಗುರುತಿಸಲಾಗಿದೆ.ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್ನಲ್ಲಿ ಈ ಘಟನೆ ನಡೆದಿದೆ. ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೃತಳ ತಾಯಿ ನೀಡಿರುವ ದೂರಿನಲ್ಲಿ, ಐಶ್ವರ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಎಂಬಾತನೊಂದಿಗೆ ಪ್ರೀತಿಯಲ್ಲಿದ್ದಳು. ಈ ಹಿಂದೆ ಐಶ್ವರ್ಯ, ತನ್ನ ಪರಿಚಯದ ಅರುಂಧತಿ ಎಂಬಾಕೆಯ ಪ್ರಿಯಕರನ ಸ್ನೇಹಿತ ಸಚಿನ್ ಎಂಬಾತನೊಂದಿಗೆ ಒಯೋ ಕೊಠಡಿಗೆ ತೆರಳಿದ್ದಳು. ಈ ವಿಚಾರವನ್ನು ಅರುಂಧತಿ ಬಳಿಕ ಐಶ್ವರ್ಯ ಕುಟುಂಬದವರಿಗೆ ತಿಳಿಸಿದ್ದಳು. ಇದರಿಂದ ಆಕೆಯ ಕುಟುಂಬದ ಸದಸ್ಯರು ಐಶ್ವರ್ಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆ ನಂತರ, ತನ್ನೊಂದಿಗೆ ಸ್ನೇಹ ಸಂಬಂಧ ಹೊಂದಿದ್ದ ಸಂತೋಷ್ ತನ್ನನ್ನು ನಂಬುತ್ತಿಲ್ಲ ಎಂಬ ಕಾರಣಕ್ಕೆ ಐಶ್ವರ್ಯ ಬೇಸರಗೊಂಡಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೂರಿನ ವಿವರಗಳನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ಐಶ್ವರ್ಯ ಮತ್ತು ಸಂತೋಷ್ ಲಾಡ್ಜ್ಗೆ ತೆರಳಿದ್ದರು. ಸಂಜೆ ಇಬ್ಬರೂ ಮದ್ಯ ಸೇವಿಸಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾದದ ನಡುವೆ ಐಶ್ವರ್ಯ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಸಂತೋಷ್, ಏನು ಬೇಕಾದರೂ ಮಾಡಿಕೋ ಎಂದು ಹೇಳಿ ಕೈಯಿಂದ ಆಕೆಯನ್ನು ತಳ್ಳಿದ್ದಾನೆ ಎನ್ನಲಾಗಿದೆ.
ಇದರಿಂದ ಸಮತೋಲನ ಕಳೆದುಕೊಂಡ ಐಶ್ವರ್ಯ ಲಾಡ್ಜ್ನ ಕಿಟಕಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ಆರೋಪಿಯನ್ನು ದಾಖಲಿಸಿಕೊಂಡು ಬಂಧಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.






