ಕುಂದಾಪುರ: ಬಸ್ರೂರು ವಲಯ ಪದ್ಮಶಾಲಿ ಕ್ರಿಯಾವೇದಿಕೆ ಬೆಳ್ಳಿಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ

Views: 10
ಕನ್ನಡ ಕರಾವಳಿ ಸುದ್ದಿ: ಬಸ್ರೂರು ವಲಯ ಪದ್ಮಶಾಲಿ ಕ್ರಿಯಾವೇದಿಕೆ ಬೆಳ್ಳಿಹಬ್ಬದ ಪ್ರಯುಕ್ತ ಪೂರ್ವ ಭಾವಿ ಸಭೆಯು ನ.22 ಭಾನುವಾರ ಜಪ್ತಿ ಶಬರಿ ಎಂಟರ್ಪೈಸಸ್ನಲ್ಲಿ ಜರುಗಿತು.ಈ ಸಂದರ್ಭದಲ್ಲಿ ಬೆಳ್ಳಿಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಬೆಳ್ಳಿಹಬ್ಬದ ಸಮಾಜಮುಖಿ ಕಾರ್ಯಕ್ರಮಗಳ ವಿವರ ನೀಡಿದ ರಾಜೇಂದ್ರ ಶೆಟ್ಟಿಗಾರ್
ಬೆಳ್ಳಿಹಬ್ಬದ ಅಂಗವಾಗಿ ಹಮ್ಮಿಕೊಂಡ ಸಮಾಜಮುಖಿ ಕಾರ್ಯಕ್ರಮಗಳ ವಿವರಗಳನ್ನು ರಜತಮಹೋತ್ಸವ ಸಮಿತಿಯ ಅಧ್ಯಕ್ಷ ರಾಜೇಂದ್ರ ಶೆಟ್ಟಿಗಾರ್ ಬಸ್ರೂರು ಸಭೆಗೆ ಮಾಹಿತಿ ನೀಡಿದರು. ಸ್ವಚ್ಛತಾ ಅಭಿಯಾನ ಯೋಜನೆಯಡಿ ಒಂದು ದೇವಸ್ಥಾನ ಮತ್ತು ಒಂದು ಶಾಲಾ ವಠಾರವನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ. ಸ್ಥಳೀಯ ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಸಲಾಗಿದ್ದು, 118 ಯೂನಿಟ್ ರಕ್ತ ಸಂಗ್ರಹಿಸಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕಕ್ಕೆ ನೀಡಲಾಗಿದೆ. ಕೋಟೇಶ್ವರ, ಅಮಾಸೆಬೈಲು, ಸಾಸ್ತಾನ ಮತ್ತು ಬೈಕಾಡಿ ಪದ್ಮಶಾಲಿ ಸಂಘಟನೆಗಳ ನಡುವಿನ ಕ್ರೀಡಾಕೂಟ ಯಶಸ್ವಿಯಾಗಿ ನಡೆಸಲಾಗಿದೆ.
ವಿವಿಧ ಸಾಧಕರು, ಆರ್ಥಿಕ ನೆರವು, ವಿದ್ಯಾರ್ಥಿ ವೇತನ ಮತ್ತು ದಾನಿಗಳಿಗೆ ಸನ್ಮಾನ
ರಜತ ಮಹೋತ್ಸವದ ವೇದಿಕೆಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು, ವಿದ್ಯಾನಿಧಿ ದಾನಿಗಳನ್ನು ಹಾಗೂ ಕೂಡುಕಟ್ಟಿನ ದೇವಸ್ಥಾನಗಳ ಗುರಿಕಾರರು ಹಾಗೂ – ಮೊಕ್ತೇಸರರನ್ನು’ಹಾಗೂ ಹಿರಿಯರನ್ನು ಬೆಳ್ಳಿಹಬ್ಬದಲ್ಲಿ ಗೌರವಿಸಿ, ಸನ್ಮಾನಿಸಲಾಗುವುದು. ನೇಕಾರರನ್ನು ದಾನಿಗಳನ್ನು ವಲಯ ಸಂಘಟನೆಗಳ ಸಂತ್ರಸ್ತರಿಗೆ ಆರ್ಥಿಕ ನೆರವು ಹಾಗೂ ಮನೆ ನಿರ್ಮಾಣದ ಫಲಾನುಭವಿಗೆ ಮಂಜೂರಾತಿ ಪತ್ರ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮಗಳು ಕ್ರೀಡೋತ್ಸವದಲ್ಲಿ ಬೆಳ್ಳಿಹಬ್ಬದ ಜರುಗಲಿವೆ. ವಿಜೇತರಾದವರಿಗೆ ಪ್ರತಿಭಾನ್ವಿತ ವೇದಿಕೆಯಲ್ಲಿ ಬಹುಮಾನ ವಿತರಣೆ ಮಾಡಲಾಗುವುದೆಂದು ತಿಳಿಸಿದರು.
ಬೆಳ್ಳಿ ಹಬ್ಬದ ಸಭಾ ಕಾರ್ಯಕ್ರಮ
25 ನೇ ವರ್ಷದ ಬೆಳ್ಳಿಹಬ್ಬವು ಡಿ.13 ಬಸ್ರೂರು ಶ್ರೀಶಾರದಾ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದ್ದು, ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮವನ್ನು ಉದ್ಘಾಟಿಸಿಸಲಿದ್ದಾರೆ.

ಕಾರ್ಯಕ್ರಮದ ರಜತಮಹೋತ್ಸವ ಸಮಿತಿಯ ಅಧ್ಯಕ್ಷ ಬಾರ್ಕೂರು ಶ್ರೀನಿವಾಸ ಶೆಟ್ಟಿಗಾರ್, ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ, ಪದ್ಮಶಾಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿಠಲ ಶೆಟ್ಟಿಗಾರ್ ಸಗ್ರಿ, ಸಾಲಿಕೇರಿ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಸುರೇಶ. ಶೆಟ್ಟಿಗಾರ್, ಮುಂಬಯಿ ಪದ್ಮಶಾಲಿ ಸಮಾಜ ಸೇವಾ ‘ಸಂಘದ ಅಧ್ಯಕ್ಷ ಕೃಷ್ಣಾನಂದ ಶೆಟ್ಟಿಗಾರ್ ಸಾಲಿಕೇರಿ, ಜಪ್ತಿ ಕೃಷ್ಣಕೃಪಾ ಕ್ಯಾಶ್ ಇಂಡಸ್ಟ್ರೀಸ್ನ ಮಾಲೀಕ ಜಯಪ್ರಕಾಶ ಶೆಟ್ಟಿ, ತೆಕ್ಕಟ್ಟೆ ರಾಘವೇಂದ್ರ ವೆಂಕಟರಮಣ ಶೆಟ್ಟಿಗಾರ್ ಡೈರೆಕ್ಟರ್ ಆಫ್ ಟೆಕ್ನಾಲಜಿ ಯುಎಸ್ಎ ಹಾಗೂ ವಲಯ ಪದ್ಮಶಾಲಿ ಸಂಘಟನೆಗಳ ಭಾಗವಹಿಸಲಿದ್ದಾರೆ.

ಅಧ್ಯಕ್ಷರು ಕ್ರಿಯಾವೇದಿಕೆಯ ಅಧ್ಯಕ್ಷ ಕೈಲ್ಕೆರೆ ಚಂದ್ರಶೇಖರ ಶೆಟ್ಟಿಗಾರ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಾ. ಬಸವರಾಜ ಶೆಟ್ಟಿಗಾರ್, ವೇದಿಕೆಯ ಗೌರವ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಸುಬ್ಬಯ್ಯ ಶೆಟ್ಟಿಗಾರ್, ರಜತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ರವೀಂದ್ರ ಶೆಟ್ಟಿಗಾರ್, ಉದ್ಯಮಿ ಚಂದ್ರಶೇಖರ ಶೆಟ್ಟಿಗಾರ್, ಶಬರಿ ಎಂಟರ್ಪೈಸಸ್ನ ನಾಗರಾಜ ಶೆಟ್ಟಿಗಾರ್, ಶಿವರಾಮ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಕೋಟೇಶ್ವರ ವಲಯ ಸಂಘಟನೆಯ ಪ್ರಮೋದ್ ಶೆಟ್ಟಿಗಾರ್, ಮಹಾಸಭಾದ ಜತೆ ಕಾರ್ಯದರ್ಶಿ ವೆಂಕಟೇಶ ಶೆಟ್ಟಿಗಾರ್, ಅಮಾಸೆಬೈಲು ಸಂಘಟನೆಯ ವಿಶ್ವನಾಥ ಶೆಟ್ಟಿಗಾರ್, ಅಶ್ವಿನ್ ಶೆಟ್ಟಿಗಾರ್, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವಿಜಯ ಶೆಟ್ಟಿಗಾರ್, ಶೋಭಾ ಮನೋಜ್ ಶೆಟ್ಟಿಗಾರ್, ಕ್ರೀಡಾ ಸಂಚಾಲಕ ರಾಘವೇಂದ್ರ ಶೆಟ್ಟಿಗಾರ್, ಸಂಘಟನಾ ಕಾರ್ಯದರ್ಶಿ ಪ್ರದೀಪ ಶೆಟ್ಟಿಗಾರ್ ಜಪ್ತಿ, ಶರ್ಮಿಳಾ ಶೆಟ್ಟಿಗಾರ್, ಹಾಗೂ ಶ್ರೀದೇವಿ ಸತ್ಯನಾರಾಯಣ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಸುಲೋಚನಾ ಶೆಟ್ಟಿಗಾರ್ ಪ್ರಾರ್ಥಿಸಿ, ಸುಬ್ಬಯ್ಯ ಶೆಟ್ಟಿಗಾರ್ ಸ್ವಾಗತಿಸಿ, ರವೀಂದ್ರ ಶೆಟ್ಟಿಗಾರ್ ವಂದಿಸಿದರು.






