ಇತರೆ

ಪತಿಯ ಜೊತೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರು ಡಿಕ್ಕಿ; ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು 

Views: 34

ಕನ್ನಡ ಕರಾವಳಿ ಸುದ್ದಿ: ರವಿವಾರ ರಾತ್ರಿ ಕಾರು ಢಿಕ್ಕಿ ಹೊಡೆದ ಪರಿಣಾಮ ಪತಿ ಮತ್ತು ಮಗುವಿನ ಜತೆ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಗಂಭೀರ ಗಾಯಗೊಂಡಿದ್ದು, ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬದಿಯಡ್ಕ ಮರ್ಚೆಂಟ್ಸ್ ಸೊಸೈಟಿಯ ಪಿಗ್ನಿ ಸಂಗ್ರಾಹಕ ರಾಜೇಶ್ ಅವರ ಪತ್ನಿ ವೀಣಾ ಮೃತಪಟ್ಟವರು. ರವಿವಾರ ರಾತ್ರಿ ಬದಿಯಡ್ಕ ಮೇಲಿನ ಪೇಟೆಯಲ್ಲಿ ಅಪಘಾತ ಸಂಭವಿಸಿತ್ತು.

ರಾಜೇಶ್ ಮತ್ತು ಅವರ ಜತೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಮಗಳು ರತನ್ಯ ಅವರು ಕೂಡ ಗಾಯಗೊಂಡಿದ್ದಾರೆ.

ಪೆರ್ಲದಲ್ಲಿರುವ ಕುಟುಂಬದ ಮನೆಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ರಾಜೇಶ್ ಮತ್ತು ಕುಟುಂಬ ಪ್ರಯಾಣಿಸುತ್ತಿದ್ದ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಢಿಕ್ಕಿಯ ಬಳಿಕ ಕಾರು ಪಲ್ಟಿಯಾಗಿದೆ. ಘಟನೆಗೆ ಸಂಬಂಧಿಸಿ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button
error: Content is protected !!