ಇತರೆ
ಸಹೋದರಿಯರನ್ನು ಮದುವೆಯಾದ ವರರ ಕೊರಳಿಗೆ 500 ರೂ. ಜೋಡಿಸಿ1 ಕೋಟಿ ರೂ. ಮೌಲ್ಯದ ನೋಟಿನ ಹಾರ ಉಡುಗೊರೆ!
Views: 36
ಕನ್ನಡ ಕರಾವಳಿ ಸುದ್ದಿ: ತನ್ನ ಸಹೋದರಿಯರನ್ನು ಮದುವೆಯಾದ ಉತ್ತರ ಪ್ರದೇಶದ ಇಬ್ಬರು ಸೋದರ ಸಂಬಂಧಿಗಳಿಗೆ, ರಾಜಸ್ಥಾನದ ಗ್ರಾಮ ಪಂಚಾಯ್ತಿ ಅಧ್ಯಕ್ಷನೊಬ್ಬ 1 ಕೋಟಿ ರೂ. ಮೌಲ್ಯದ, 500 ರೂ. ಮುಖಬೆಲೆಯ ನೋಟುಗಳನ್ನೇ ಜೋಡಿಸಿ ತಯಾರಿಸಲಾದ 100 ಅಡಿ ಉದ್ದದ ದೊಡ್ಡ ಹಾರವನ್ನು ಉಡುಗೊರೆಯಾಗಿ ನೀಡಿದ್ದಾನೆ! ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ನಗ್ಲಾ ಫೊಂಡಾ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ನಗ್ಲಾ ಫೋಂಡಾ ಹಳ್ಳಿಯ ನಿವಾಸಿಗಳಾದ ಪ್ರಶಾಂತ್, ಕನ್ಹಾ ರಾಘವ್ ಎಂಬುವರು, ರಾಜಸ್ಥಾನದ ಗೋವರ್ಧನ್ ಜಿಲ್ಲೆಯ ಮುಡೈರಸ್ ಎಂಬ ಹಳ್ಳಿಯ ಒಂದೇ ಕುಟುಂಬದ ಅಕ್ಕ- ತಂಗಿಯನ್ನು ಮದುವೆಯಾಗಿದ್ದರೆ. ಶನಿವಾರದಂದು ನವಜೋಡಿಗಳನ್ನು ವರರ ಹಳ್ಳಿಗೆ ಕರೆತಂದಾಗ, ವರರ ಭಾವ ಹಾಗೂ ರಾಜಸ್ಥಾನದ ನಂದೋಲಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ಯೋಗೇಶ್ ಕುಮಾರ್ ಈ ದೈತ್ಯ ನೋಟಿನ ಹಾರ ನೀಡಿದ್ದಾನೆ. ಹಾರ ತುಂಬಾ ಉದ್ದವಿದ್ದಿದ್ದರಿಂದ ವರರಿಬ್ಬರನ್ನು ಮನೆಯ ಮೇಲ್ಬಾವಣಿಯಲ್ಲಿ ನಿಲ್ಲಿಸಿ, ಅಲ್ಲಿಂದಲೇ ಅವರ ಕೊರಳಿಗೆ ಈ ಬೃಹತ್ ನೋಟಿನ ಹಾರಗಳನ್ನು ಹಾಕಲಾಯಿತು.






