ಶಿಕ್ಷಣ

ಪರ್ಕಳ ಪ್ರೌಢಶಾಲೆಯಲ್ಲಿ 1992ರ ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ 

Views: 34

ಈ ಬಾರಿಯ ಸ್ವಾತಂತ್ರ್ಯೊತ್ಸವದಂದು ಪರ್ಕಳ ಪ್ರೌಢಶಾಲೆಯಲ್ಲಿ ಸಂಭ್ರಮದ ವಾತಾವರಣ. ಕಾರಣ 1992ರ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಕಲಿಸಿದ ಗುರುಗಳನ್ನು ಸುಮಾರು 31 ವರ್ಷಗಳ ಬಳಿಕ ಕಂಡು ತಮ್ಮ ಶಾಲಾ ದಿನಗಳನ್ನು ನೆನೆದು ಭಾವುಕರಾದ ಮಧುರ ಕ್ಷಣ ಮೊದಲಾಗಿ 77ನೆಯ ಸ್ವಾತಂತ್ರೋತ್ಸವವನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ಶಿಕ್ಷಕಿ, ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು.

92ನೇ ಸಾಲಿನ ವಿದ್ಯಾರ್ಥಿ ಶ್ರೀ ಸುರೇಂದ್ರ ನಾಯಕ್ ದ್ವಜಾರೋಹಣ ಗೈದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಪ್ರಾತಃ ಸ್ಮರಣೀಯ ರಾಷ್ಟ್ರ ನಾಯಕರನ್ನು ಸ್ಮರಿಸಲಾಯಿತು. ಮಕ್ಕಳಿಗೆ ಸಿಹಿ ಹಂಚುವುದರೊಂದಿಗೆ ಸ್ವಾತಂತ್ರ್ಯ ಕಾರ್ಯಕ್ರಮ ಸಂಪನ್ನಗೊಂಡಿತು.

ಅಪರಾಹ್ನ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪ್ರಸ್ತುತ ನಿವೃತ್ತಿಯಾಗಿರುವ ಶ್ರೀ ಎಚ್ ಚಂದ್ರಯ್ಯ ಆಚಾರ್ಯ, ಶ್ರೀ ರಂಗಪ್ಪ ನಾಯಕ್, ಶ್ರೀ ಶ್ರೀನಿವಾಸ್ ನಾಯಕ್, ಶ್ರೀ ಶಿವರಾಮ ಶೆಟ್ಟಿ, ಶ್ರೀ ವಾಸುದೇವ ಪ್ರಭು , ಶ್ರೀಮತಿ ಗೀತಾ ಕೆ ಭಟ್, ಶ್ರೀ ರಾಘವ ಸಿ ಎಚ್ , ಶ್ರೀ ಶೇಖರ ಕುಲಾಲ್, ಶ್ರೀ ಸೂರ್ಯ ಕುಮಾರ್, ಶ್ರೀ ಗ್ರಹಪತಿ ಶಾಸ್ತ್ರಿ , ಶ್ರೀಮತಿ ಯಶೋಧ, ಶ್ರೀಮತಿ ವಸಂತಿ, ಶ್ರೀಮತಿ ಪ್ರವೀಣ, ಶ್ರೀ ರಾಮಚಂದ್ರ, ಶ್ರೀಮತಿ ಮಾಲಿನಿ, ಶ್ರೀ ಪ್ರಭಾಕರ ಪ್ರಭು, ಶ್ರೀ ಗಣೇಶ್ ಪಾಟೀಲ್, ಶ್ರೀಮತಿ ಸಂಧ್ಯಾ ಪ್ರಭು, ಶ್ರೀ ಶಿವರಾಮ್ ನಾಯ್ಕ್, ಇವರುಗಳು ಗುರುವಂದನೆ ಸ್ವೀಕರಿಸಿದರು.

ಆಗಮಿಸಿದ ಎಲ್ಲಾ ಗುರುಗಳನ್ನು, ಅತಿಥಿಗಳನ್ನು ಶ್ರೀ ಮಂಜುನಾಥ್ ಪ್ರಭು ಸ್ವಾಗತಿಸಿದರು. ಶ್ರೀ ಪ್ರಶಾಂತ್ ಶೆಟ್ಟಿಗಾರ್ ಪ್ರಸ್ತಾವನೆಗೈದರು, ಶ್ರೀ ದಿನೇಶ್ ಪೂಜಾರಿ, ಶ್ರೀ ಪ್ರಕಾಶ್ ನಾಯಕ್, ಶ್ರೀ ಹರೀಶ್ ಭಂಡಾರಿ, ಶ್ರೀ ಶ್ರೀನಾಥ್ ಕಾಮತ್, ಶ್ರೀ ಹರೀಶ್ ಪೂಜಾರಿ, ಶ್ರೀಮತಿ ರಜನಿ ನಾಯಕ್, ಶ್ರೀಮತಿ ನಾಗವೇಣಿ, ಶ್ರೀಮತಿ ಲೀಲಾಕ್ಷಿ ಇವರುಗಳು ಗುರುಗಳ ಪರಿಚಯ ವಾಚನ ಮಾಡಿದರು. ಶಿಕ್ಷಕೇತರಾದ ಶ್ರೀ ನಾರಾಯಣ ನಾಯಕ್, ಶ್ರೀ ಚಂದ್ರ ನಾಯಕ್ , ಶ್ರೀ ಅಪ್ಪು , ಶ್ರೀ ರಾಮಚಂದ್ರ ನಾಯಕ್ ಇವರುಗಳನ್ನು ಅಭಿನಂದಿಸಲಾಯಿತು.

ಶ್ರೀಮತಿ ಗೀತಾ ಶೆಟ್ಟಿಗಾರ್ ಅಗಲಿದ ಶಿಕ್ಷಕ ಹಾಗೂ ಸಹಪಾಠಿಗಳನ್ನು ನೆನೆಸುತ್ತಾ ನುಡಿನಮನ ಕಾರ್ಯಕ್ರಮ ನಡೆಸಿಕೊಟ್ಟರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಶಾಲಾ ಸಂಚಾಲಕರಾದ ಶ್ರೀ ದಿನೇಶ್ ಹೆಗ್ಡೆ, ಕನ್ನಡ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾರಾದ ಶ್ರೀ ಆನಂದ ನಾಯ್ಕ್ , ಆಂಗ್ಲ ಮಾಧ್ಯಮ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಸುಜಾತಾ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಾಲೆಗೆ ಶಾಶ್ವತ ಕೊಡುಗೆಯಾಗಿ ಸಿ ಸಿ ಕ್ಯಾಮರಾಕ್ಕೆ ಟೆಲಿವಿಷನ್ ಮತ್ತು 3 ಶಾಲಾ ಕೊಠಡಿಗಳಿಗೆ ಗ್ರೀನ್ ಬೋರ್ಡ್ ನ್ನು ನೀಡಲಾಯಿತು.

ಕಾರ್ಯಕ್ರಮದ ನೆನಪಿನ ಸಲುವಾಗಿ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು.

ಗಣಿತ ಅಧ್ಯಾಪಕರಾದ ಶ್ರೀ ವಾಸುದೇವ ನಾಯಕ್ ಮತ್ತು ಚಿತ್ರಕಲೆ ಅಧ್ಯಾಪಕರಾದ ಶ್ರೀ ರಾಘವ ಸಿ ಎಚ್ ಅಂದು ಕಲಿಸಿದ ಕಲಿಕಾ ಕೊಠಡಿಯಲ್ಲಿ ಅಂದು ಕಲಿತ ಪಾಠವನ್ನೆ ಮತ್ತೆ ಪುನರಪಿ ನೆನಪಿಸಿದ್ದು ತುಂಬಾ ಖುಷಿ ಕೊಟ್ಟಿತು.

ಶ್ರೀಮತಿ ಧನ್ಯ ಶೆಟ್ಟಿ ಮತ್ತು ಶ್ರೀ ಶಂಕರ್ ಬಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ನರೇಂದ್ರ ಶೆಟ್ಟಿಗಾರ್ ಧನ್ಯವಾದ ವಂದನಾರ್ಪಣೆಗೈದರು.

1992 ಸಾಲಿನ ಹತ್ತನೇ ತರಗತಿಯಲ್ಲಿ ವ್ಯಾಸoಗ ಮಾಡಿದ ನೂರಾರು ಹಳೇ ವಿದ್ಯಾರ್ಥಿಗಳು ಶಾಲಾ ದಿನಗಳನ್ನು ನೆನಪಿಸುವುದರ ಜೊತೆಗೆ ಕಾರ್ಯಕ್ರಮದ ಯಶ್ವಸಿಗೆ ಸಹಕರಿಸಿದರು.

Related Articles

Back to top button
error: Content is protected !!