ಯುವಜನ
ಬೈಕ್-ಟಿಪ್ಪರ್ ನಡುವೆ ಅಪಘಾತ: ಯುವಕ ಸಾವು
Views: 21
ಕನ್ನಡ ಕರಾವಳಿ ಸುದ್ದಿ: ಬೈಕ್ ಹಾಗೂ ಟಿಪ್ಪರ್ನಡುವೆ ನಡೆದ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆ ಬೆಳ್ಳಣ್ನಲ್ಲಿ ಸಂಭವಿಸಿದೆ.
ಪಿಲಾರು ಗ್ರಾಮದ ಕುಂಜಿಗುಡ್ಡೆ ನಿವಾಸಿ ತ್ರಿಶಾಂತ್ ಯಾನೆ ಪುನೀತ್ (18) ಮೃತಪಟ್ಟವರು.
ಬೆಳ್ಳಣ್ ನಿಂದ ಪಿಲಾರು ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಬೆಳ್ಳಣ್ ಸೊಸೈಟಿ ಮುಂಭಾಗದ ರಸ್ತೆಯ ಬದಿಯಲ್ಲಿ ತಿರುವು ಪಡೆಯಲು ನಿಂತಿದ್ದ ಟಿಪ್ಪರ್ನ ಮುಂಭಾಗಕ್ಕೆ ಬೈಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಪುನೀತ್ ಅವರ ತಲೆ ಟಿಪ್ಪರ್ಗೆ ಬಡಿದು ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಪ್ರತಿಭಾವಂತ ಯುವಕನಾಗಿದ್ದ ಪುನೀತ್ ಡಿ.ಜೆ. ಪ್ಲೇಯರ್ಆಗಿ ಪರಿಸರದಲ್ಲಿ ಗುರುತಿಸಿಕೊಂಡಿದ್ದರು.






