ಸೀರೆ ಬಾಕ್ಸ್ ಫೋಲ್ಡಿಂಗ್’ ಹಾಗೂ ವಿವಿಧ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ
Views: 28
ಕನ್ನಡ ಕರಾವಳಿ ಸುದ್ದಿ: ಟಿ.ಎಂ.ಜಿ. ಸುನಿಧಿ ಫೌಂಡೇಶನ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್ (ಬಿ.ವಿ.ಟಿ) ಮಣಿಪಾಲ ಇವುಗಳ ಪ್ರಾಯೋಜಕತ್ವದಲ್ಲಿ, ಸಮೃದ್ಧಿ ಸಂಜೀವಿನಿ ಒಕ್ಕೂಟ ಮತ್ತು ಮಾಳೂರು ಕೃಷಿ ಪತ್ತಿನ ಸಹಕಾರ ಸಂಘದ ಜಂಟಿ ಸಹಯೋಗದೊಂದಿಗೆ ಆಯೋಜಿಸಲಾದ 10 ದಿನಗಳ ಉಚಿತ ‘ಸೀರೆ ಬಾಕ್ಸ್ ಫೋಲ್ಡಿಂಗ್’ ಹಾಗೂ ವಿವಿಧ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಮಾಳೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ಸಮೃದ್ಧಿ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ನಾಗರತ್ನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು .
ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಲೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಶಾಂತ್ ಮತ್ತು ಉಪಾಧ್ಯಕ್ಷರಾದ ಅರುಣ್ ಅವರು ಇಂಥಾ ಅದ್ಬುತ ಅವಕಾಶ ಸಿಗುವುದೇ ಕಡಿಮೆ ಇದನ್ನು ಸಮರ್ಥವಾಗಿ ಬಳಸಿಕೊಂಡಾಗ ಮಹಿಳಾ ಸಬಲೀಕರಣದ ವಾಗಲು ಸಾಧ್ಯ ಇಂಥಾ ಸಂಸ್ಥೆಗಳು ನಿಜವಾದ ಮಹಿಳಾ ಸಬಲೀಕರಣ ಮಾಡುತ್ತಿದೆ ಎಂದರು. ಬಿ.ವಿ.ಟಿ ಮಣಿಪಾಲದ ರಾಘವೇಂದ್ರ ಆಚಾರ್ಯ ಮತ್ತು ತರಬೇತುದಾರೆ ಜ್ಯೋತಿ ಶೆಟ್ಟಿ ಅವರು ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವಲ್ಲಿ ಇಂತಹ ಕೌಶಲ್ಯ ತರಬೇತಿಗಳ ಮಹತ್ವವನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ತರಬೇತಿ ಆಯೋಜಕಿ ಹಾಗೂ ಸಂಜೀವಿನಿ ಡಿ.ಆರ್.ಪಿ ನಾಗವೇಣಿ, ಆಶಾ ಶ್ರೀನಿವಾಸ್ , ವಸಂತಿ ಸಂಧ್ಯಾ ಮತ್ತು ಎಂ.ಬಿ.ಕೆ ಸಮತಾ ಉಪಸ್ಥಿತರಿದ್ದು ತರಬೇತಿದಾರರಿಗೆ ಶುಭ ಹಾರೈಸಿದರು.
ಈ 10 ದಿನಗಳ ತರಬೇತಿ ಶಿಬಿರದಲ್ಲಿ ಸೀರೆ ಬಾಕ್ಸ್ ಫೋಲ್ಡಿಂಗ್ ಹಾಗೂ ಸೀರೆ ಕುಚ್ಚು ಕಟ್ಟುವುದು ಸೇರಿದಂತೆ ವಿವಿಧ ಕೌಶಲ್ಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದ್ದು, ಒಟ್ಟು 35 ಮಹಿಳೆಯರು ಈ ತರಬೇತಿಯ ಪ್ರಯೋಜನ ಪಡೆದರು.






