ಇತರೆ
ಬಾಯ್ಫ್ರೆಂಡ್ಗೆ ಕಳಿಸಿದ್ದ ಖಾಸಗಿ, ನಗ್ನ ಫೋಟೋ ವೆಬ್ಸೈಟ್ನಲ್ಲಿ ಅಪ್ಲೋಡ್! ಬೆಚ್ಚಿಬಿದ್ದ ಯುವತಿ
Views: 86
ಕನ್ನಡ ಕರಾವಳಿ ಸುದ್ದಿ: ಯುವತಿಯೊಬ್ಬಳು ತಾನು ಮದುವೆಯಾಗಲು ಬಯಸಿದ್ದ ಯುವಕನಿಗೆ ಕಳುಹಿಸಿದ್ದ ಖಾಸಗಿ ಮತ್ತು ನಗ್ನ ಫೋಟೊಗಳು ಸೋರಿಕೆಯಾಗಿ ಅಶ್ಲೀಲ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗಿವೆ.
ಇದರಿಂದ ಆತಂಕಗೊಂಡ ಯುವತಿ ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
28 ವರ್ಷದ ಯುವತಿ, ಯುವಕನ ಮೇಲಿನ ನಂಬಿಕೆಯಿಂದ ತನ್ನ ಖಾಸಗಿ ಫೋಟೊಗಳನ್ನು ಸ್ಕ್ಯಾಪ್ಚಾಟ್ ಮೂಲಕ ಹಂಚಿಕೊಂಡಿದ್ದಳು. ಆದರೆ, ಕಿಡಿಗೇಡಿಗಳು ಆ ಖಾತೆಗಳನ್ನು ಹ್ಯಾಕ್ ಮಾಡಿ ಫೋಟೊಗಳನ್ನು ಅಶ್ಲೀಲ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






