ಇತರೆ
ಕುಂದಾಪುರ: ಮೇಯುತ್ತಿದ್ದ ದನದ ಕಾಲಿಗೆ ಬಟ್ಟೆ ಕಟ್ಟಿ, ಬಲವಂತವಾಗಿ ಕಾರಿಗೆ ತುಂಬಿಸಲು ಯತ್ನ
Views: 46
ಕನ್ನಡ ಕರಾವಳಿ ಸುದ್ದಿ: ದನದ ಕಾಲಿಗೆ ಬಟ್ಟೆ ಕಟ್ಟಿ, ಬಲವಂತವಾಗಿ ಕಾರಿಗೆ ತುಂಬಿಸಲು ಯತ್ನಿಸಿದ ಮೂವರು ಆರೋಪಿಗಳು ದನವನ್ನು ಬಿಟ್ಟು ಪರಾರಿಯಾದ ಘಟನೆ ವಾಲ್ತೂರು ಕೊಕ್ಕೋಡಿ ರಸ್ತೆಯ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಇಮ್ಮಿಯಾಝ್, ರಿಜ್ವಾನ್ ಅಲಿಯಾಸ್ ದಸ್ತಗೀರ್ ಹಾಗೂ ಜಿಮಾಮ್ ಆರೋಪಿಗಳು. ಕಾವ್ರಾಡಿ ಗ್ರಾಮದ ಪ್ರಕಾಶ ಅವರಿಗೆ ಸೇರಿದ ದನವು ವಾಲ್ತೂರು ಕೊಕ್ಕೊಡಿಗೆ ಹೋಗುವ ದಾರಿಯ ಬಳಿಯ ಗೇರು ಹಾಡಿಯಲ್ಲಿ ಮೇಯುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಆರೋಪಿಗಳು ದನದ ಕಾಲಿಗೆ ಬಟ್ಟೆ ಕಟ್ಟಿ, ಬಲವಂತವಾಗಿ ಎಳೆದುಕೊಂಡು ಹೋಗಿ ಕಾರಿಗೆ ತುಂಬಿಸಲು ಯತ್ನಿಸಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಹರೀಶ ಶೆಟ್ಟಿ ಅವರನ್ನು ಕಂಡ ಆರೋಪಿಗಳು ದನವನ್ನು ಅಲ್ಲಿಯೇ ಬಿಟ್ಟು ಕಾರು ಹಾಗೂ ಸ್ಕೂಟರ್ನಲ್ಲಿ ಪರಾರಿಯಾಗಿದ್ದಾರೆ. ಬಳಿಕ ಕಾವ್ರಾಡಿ ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಕಾರನ್ನು ರಸ್ತೆ ಬದಿಯಲ್ಲಿ ಬಿಟ್ಟು ಸ್ಕೂಟರ್ನಲ್ಲಿ ಪರಾರಿಯಾಗಿದ್ದಾರೆ.
ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






