ಇತರೆ

ಅಂಪಾರು: ಮದುವೆಯಾಗದೇ ಚಿಂತೆಯಿಂದ ಬೇಸತ್ತು ಆತ್ಮಹತ್ಯೆ

Views: 88

ಕನ್ನಡ ಕರಾವಳಿ ಸುದ್ದಿ: ಅಂಪಾರು ಗ್ರಾಮದ ಶಾನ್ಕಟ್ಟು ಉದಯ ಕುಮಾರ್ ಶೆಟ್ಟಿ (52) ಅವರು ಮನೆಯ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಾಯಿ ಮತ್ತು ತಂಗಿಯ ಜತೆಗೆ ಅಂಪಾರಿನ ಶಾನ್ಕಟ್ಟು ಮನೆಯಲ್ಲಿ ಕೃಷಿ ಕೆಲಸವನ್ನು ಮಾಡಿಕೊಂಡು ವಾಸವಾಗಿದ್ದರು.

ಉದಯ ಕುಮಾರ್ ಶೆಟ್ಟಿ ಅವರಿಗೆ ಈವರೆಗೂ ವಿವಾಹವಾಗದೇ ಇದ್ದು ತನ್ನ ತಾಯಿಯ ನಂತರ ತನಗಾರು ಗತಿ ಎಂದು ಚಿಂತಿಸುತ್ತಿದ್ದು ಅದೇ ಚಿಂತೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣುಬಿಗಿದ ಸ್ಥಿತಿಯಲ್ಲಿದ್ದವರನ್ನು ಚಿಕಿತ್ಸೆಗೆ ಆ್ಯಂಬುಲೆನ್ಸ್‌ನಲ್ಲಿ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ.

Related Articles

Back to top button
error: Content is protected !!