ಕುಂದಾಪುರ: ಗೋಪಾಡಿಯಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಆತ್ಮಹತ್ಯೆ
Views: 37
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಗೋಪಾಡಿಯಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ರಾಮ ಮಡಿವಾಳ( 70 )ಆತ್ಮಹತ್ಯೆ ಮಾಡಿಕೊಂಡವರು.
ಸುಮಾರು 6 ವರ್ಷಗಳ ಹಿಂದೆ ಕ್ಯಾನ್ಸರ್ ಖಾಯಿಲೆಯಿಂದ ಗಂಟಲು ಮತ್ತು ಬಾಯಿ ಆಪರೇಷನ್ ಮಾಡಿಸಿ ಚಿಕಿತ್ಸೆಯಲ್ಲಿರುತ್ತಾರೆ. ಆದರೂ ಅವರಿಗೆ ಗುಣಮುಖವಾಗದೇ ಇದ್ದು ಈ ಬಗ್ಗೆ ಪ್ರತಿದಿನ ನನಗೆ ಈ ಬಗ್ಗೆ ನೋವು ಸಹಿಸಲು ಆಗುತ್ತಿಲ್ಲ ಎಂದು ಹೇಳುತ್ತಿದ್ದರು. ಅಗಸ್ಟ್ 9ರಂದು ರಾತ್ರಿ 9:30 ಗಂಟೆಗೆ ರಾಮ ಮಡಿವಾಳ ಅವರ ರೂಮ್ ನಲ್ಲಿ ಮಲಗಿದ್ದು, ಅಗಸ್ಟ್ 10 ರಂದು ಬೆಳಿಗ್ಗೆ 6 ಗಂಟೆಗೆ ನೋಡಿದಾಗ ರೂಮ್ ಬಾಗಿಲು ತೆರೆದಿದ್ದು ರೂಮ್ ನಲ್ಲಿ ಅವರು ಇರುವುದಿಲ್ಲ. ಮನೆಯ ಬಾವಿಯ ಸಮೀಪ ಪೈಪ್ ಗಳು ಅಸ್ತವ್ಯಸ್ತವಾಗಿದ್ದು, ನಂತರ ಮನೆಯ ಬಾವಿಯಲ್ಲಿ ನೋಡಿದಾಗ ಬಾವಿಯಲ್ಲಿ ಮುಳುಗಿರುವುದು ಕಂಡು ಬಂದಿರುತ್ತದೆ. ನಂತರ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದಂತೆ ಅವರು ಬಂದು ಬಾವಿಯ ನೀರಿನಲ್ಲಿರುವ ಅವರನ್ನು ಮೇಲಕ್ಕೆತ್ತಿ ನೋಡಿದಾಗ ಅವರ ಮೃತಪಟ್ಟಿರುವುದು ತಿಳಿದು ಬಂದಿರುತ್ತದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 34/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.






