ರಾಜಕೀಯ

ಉಡುಪಿ ಜಿಲ್ಲೆಯ ಜಿ.ಪಂ., ತಾ.ಪಂ.ಮೀಸಲಾತಿ ಪಟ್ಟಿ ಪ್ರಕಟ 

Views: 107

ಕನ್ನಡ ಕರಾವಳಿ ಸುದ್ದಿ:ಉಡುಪಿ: ಕರ್ನಾಟಕ ಸರಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 123ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಉಡುಪಿ ಜಿಲ್ಲೆಯ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ಗಳ  ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಹೊರಡಿಸಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 42 ಜಿ. ಪಂ. ಕ್ಷೇತ್ರಗಳಿಗೆ ಸಂಬಂಧಿಸಿದಂತೆ 28 ಪುರುಷ, 14 ಮಹಿಳೆ ಸ್ಥಾನಗಳ ಪೈಕಿ ಪ. ಜಾತಿಯ 2 ಪುರುಷ, 1 ಮಹಿಳೆ, ಪ. ಪಂಗಡದ 1 ಪುರುಷ, 1 ಮಹಿಳೆ, ಹಿಂದುಳಿದ ವರ್ಗ ಎ 7 ಪುರುಷ, 4 ಮಹಿಳೆ, ಹಿಂದುಳಿದ ವರ್ಗ ಬಿ 2 ಪುರುಷ, 1 ಮಹಿಳೆ, ಸಾಮಾನ್ಯ ವರ್ಗ 16 ಪುರುಷ, 7 ಮಹಿಳೆ ಸ್ಥಾನಗಳ ಮೀಸಲಾತಿ ಪ್ರಕಟಿಸಲಾಗಿದೆ.

ತಾ.ಪಂ.: ಜಿಲ್ಲೆಯಲ್ಲಿನ 144 ತಾ. ಪಂ. ಕ್ಷೇತ್ರಗಳಿಗೆ ಸಂಬಂಧಿಸಿದಂತೆ 95 ಪುರುಷ, 49 ಮಹಿಳೆ ಸ್ಥಾನಗಳ ಪೈಕಿ ಹೆಬ್ರಿ – ಪುರುಷ 7, ಮಹಿಳೆ 4, ಬೈಂದೂರು – ಪುರುಷ 11, ಮಹಿಳೆ 6, ಕಾಪು – ಪುರುಷ 2, ಮಹಿಳೆ 6, ಉಡುಪಿ ಪುರುಷ 13, ಮಹಿಳೆ 7, ಬ್ರಹ್ಮಾವರ, ಕಾರ್ಕಳ ತಲಾ 16 ಪುರುಷ, ತಲಾ 8 ಮಹಿಳೆ, ಕುಂದಾಪುರ – ಪುರುಷ 20, ಮಹಿಳೆ 10.

ಒಟ್ಟು 144 ಸ್ಥಾನಗಳಲ್ಲಿ ಪ. ಜಾ. ಪುರುಷ 8, ಮಹಿಳೆ 7, ಪ. ಪಂಗಡ ಪುರುಷ 7, ಮಹಿಳೆ 7, ಹಿಂದುಳಿದ ವರ್ಗ ಎ ಪುರುಷ 23, ಮಹಿಳೆ 13, ಹಿಂದುಳಿದ ವರ್ಗ ಬಿ ಪುರುಷ 6, ಮಹಿಳೆ 4, ಸಾಮಾನ್ಯ ವರ್ಗ ಪುರುಷ 51, ಮಹಿಳೆ 18 ಸ್ಥಾನಗಳ ಮೀಸಲು ಪ್ರಕಟವಾಗಿದೆ.

ಸದ್ಯ ಮೀಸಲಾತಿ ಸಂಖ್ಯೆಗಳನ್ನಷ್ಟೇ ಬಿಡುಗಡೆ ಮಾಡಲಾಗಿದೆ. ಕ್ಷೇತ್ರವಾರು ಮೀಸಲಾತಿಯನ್ನು ಜಿಲ್ಲಾಧಿಕಾರಿಯವರು ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಲಿದ್ದಾರೆ. ಬಳಿಕ ಇದನ್ನು ರಾಜ್ಯ ಸರಕಾರಕ್ಕೆ ಕಳುಹಿಸಿ ಅಲ್ಲಿಂದ ಅಂತಿಮ ಪ್ರಕಟಣೆ ಹೊರಡಿಸ ಲಾಗುವುದು ಎಂದು ಮೂಲಗಳು ತಿಳಿಸಿವೆ.

Related Articles

Back to top button
error: Content is protected !!