ಸಾಮಾಜಿಕ

ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ: ರೂಪಶ್ರೀ ವರ್ಕಾಡಿ, ದಿನೇಶ್ ಶೆಟ್ಟಿಗಾರ್ ಕೊಡಪದವು ಅವರಿಗೆ ಪದಕಲಾ ತಪಸ್ವಿ ಬಿರುದು ಪ್ರದಾನ 

Views: 98

ಕನ್ನಡ ಕರಾವಳಿ ಸುದ್ದಿ:ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಇವರ ವತಿಯಿಂದ ರೂಪಶ್ರೀ ವರ್ಕಾಡಿ, ದಿನೇಶ್ ಶೆಟ್ಟಿಗಾರ್ ಕೊಡಪದವು ಅವರಿಗೆ ಪದಕಲಾ ತಪಸ್ವಿ ಬಿರುದು ಪ್ರದಾನ ಮಾಡಲಾಯಿತು.

ಪದಕಲಾ ತಪಸ್ವಿ ಬಿರುದು ಪುರಸ್ಕೃತರಾದ ದಿನೇಶ್ ಶೆಟ್ಟಿಗಾರ್ ಕೊಡಪದವು ಮತ್ತು ರೂಪಶ್ರೀ ವರ್ಕಾಡಿಯವರಿಗೆ ಹಾಗೆಯೇ ಬಹುಮಾನ ಪಡೆದ ಎಲ್ಲರಿಗೆ ಅಭಿನಂದನೆಗಳು ಬರುವ ಸಮಯದಲ್ಲಿ ಎಲ್ಲರೂ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಕಾಣಲಿ. ಪ್ರಸ್ತುತ ದೇವರ ಕೃಪೆಯಿಂದ ಸಂಘವು ಬೆಳವಣಿಗೆಯನ್ನು ಕಾಣುತ್ತಿದ್ದು, ಸಂಕಷ್ಟದಲ್ಲಿರುವ ಜನರಿಗೆ ಹೆಚ್ಚಿನ ಸಹಾಯಕ್ಕೆ ಹೆಜ್ಜೆಯನ್ನಿಟ್ಟಿದೆ. ಆದ್ದರಿಂದ ಸದಸ್ಯರಿಗೆ ಯಾವುದೇ ಸಮಸ್ಯೆಗಳಿದ್ದರೆ ಪದಾಧಿಕಾರಿಗಳನ್ನು ಸಂಪರ್ಕಿಸಿ, ಸಂಘದಿಂದ ಪರಿಹಾರವನ್ನು ಪಡೆಯಬಹುದೆಂದು ಮನವಿ ಮಾಡಿದರು. ಸಂಘದ ಪ್ರತಿಯೊಂದು ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತಂದು ಅವರ ಸರ್ವತೋಮುಖ ಬೆಳವಣಿಗೆಗೆ ಅವಕಾಶ ನೀಡಬೇಕೆಂದು ಮಹಿಳಾ ಬಳಗದ ನಿಕಟಪೂರ್ವ ಅಧ್ಯಕ್ಷೆ ಸರೋಜಿನಿ ಎಚ್. ಶೆಟ್ಟಿಗಾರ್ ತಿಳಿಸಿದರು.

ಅವರು ಸೆ. 27ರಂದು ಮುಲುಂಡ್ ಪಶ್ಚಿಮದ ಮಹಾರಾಷ್ಟ್ರ ಸೇವಾ ಸಂಘ ಹಾಲ್ ನಲ್ಲಿ ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಇದರ 90ನೇ ವಾರ್ಷಿಕ ಮಹಾಸಭೆಯ ಅನಂತರ ನಡೆದ ಸಮ್ಮಾನ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಕೃಷ್ಣಾನಂದ ಎಂ. ಶೆಟ್ಟಿಗಾರ್, ಸೊಸೈಟಿಯ ಸಭಾಧ್ಯಕ್ಷ ಶಿವಾನಂದ ಆರ್. ಶೆಟ್ಟಿಗಾರ್, ಮಹಿಳಾ ಬಳಗದ ಮುಖ್ಯಸ್ಥೆ ಪ್ರಮಿಳಾ ಎಂ. ಶೆಟ್ಟಿಗಾರ್, ಕಲಾಭವನ ಸಮಿತಿಯ ಅಧ್ಯಕ್ಷ ಉತ್ತಮ್ ಎ. ಶೆಟ್ಟಿಗಾರ್, ಸಂಘದ ಉಪಾಧ್ಯಕ್ಷ ಲೀಲಾಧರ್ ಬಿ. ಶೆಟ್ಟಿಗಾರ್, ಸೊಸೈಟಿಯ ಗೌರ ಕಾರ್ಯದರ್ಶಿ ರಮೇಶ್ ಪಿ. ಶೆಟ್ಟಿಗಾರ್, ಚಲನಚಿತ್ರ ಸಹಾಯಕ ನಟಿ ರೂಪಶ್ರೀ ಶೆಟ್ಟಿಗಾರ್‌ ವರ್ಕಾಡಿ ಮತ್ತು ಕೊಡಪದವು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು  ವಿತರಿಸಲಾಯಿತು.ಸ್ವರಾ ಎಸ್. ಶೆಟ್ಟಿಗಾರ್, ದೀಪಕ್ ಡಿ. ಶೆಟ್ಟಿಗಾರ್, ವಿದ್ಯಾ ಹರೀಶ್ ಪದ್ಮಶಾಲಿ ಮತ್ತು ರಮೇಶ್ ಶೆಟ್ಟಿಗಾರ್ ವಾಚಿಸಿದರು. ಉಚಿತ ದಂತ ತಪಾಸಣ ಶಿಬಿರವನ್ನು ಆಯೋಜಿಸಿದ ಡಾ| ಜಯಶ್ರೀ ಜಿ ಶೆಟ್ಟಿಗಾರ್, ಹಣಕಾಸು ಯೋಜನೆಗಳ ಬಗ್ಗೆ ಮಾಹಿತಿ ಶಿಬಿರವನ್ನು ಆಯೋಜಿಸಿ ಕೊಟ್ಟ ಬಜಾಜ್ ಲೈಪ್ ಇನ್ಸುರೆನ್ಸ್ ಸಂಸ್ಥೆಯ ಪದಾಧಿಕಾರಿಗಳನ್ನು ಸಮ್ಮಾನಿಸಲಾಯಿತು. ನಾಟಕದ ವೇಷ ಭೂಷಣಗಾರ ಮಂಜುನಾಥ್ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು.

ಪ್ರಜ್ವಲ್ ಪಿ. ಶೆಟ್ಟಿಗಾರ್, ತನುಜ್ ಶೆಟ್ಟಿಗಾರ್, ದೀಪ್ತಿ ಜಿ. ಶೆಟ್ಟಿಗಾರ್ ಮತ್ತು ಮಲ್ಲಿಕಾ ಎಸ್. ಪದ್ಮಶಾಲಿ ಅವರಿಗೆ ಪದ್ಮ ಪ್ರತಿಭಾ 2026 ಪುರಸ್ಕಾರ ನೀಡಲಾಯಿತು.

ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಕೊಡಪದವು ಅವರ ಪರಿಚಯವನ್ನು ಲೀಲಾಧರ್ ಶೆಟ್ಟಿಗಾರ್ ಮಾಡಿ, ಪ್ರಕೃತಿಯವರು ಸಮಾನ ಪತ್ರವನ್ನು ಓದಿದರು. ರೂಪಾಶ್ರೀಯವರ ಪರಿಚಯವನ್ನು ಉತ್ತಮ್ ಶೆಟ್ಟಿಗಾರ್ ಮಾಡಿದ್ದು, ವಿದ್ಯಾ ಎಚ್. ಪದ್ಮಶಾಲಿ ಅವರು ಸಮ್ಮಾನ ಪತ್ರವನ್ನು ಓದಿದರು. ವರದಿ ವರ್ಷದಲ್ಲಿ ಅತೀ ಹೆಚ್ಚಿನ ಸದಸ್ಯರನ್ನು ನೋಂದಾಯಿಸಿದ ಮಹಿಳಾ ವಿಭಾಗದಲ್ಲಿ ಅಮೃತಾ ಕನ್ನರ್ಪಾಡಿಯವರನ್ನು ಮತ್ತು ಪುರುಷರ ವಿಭಾಗದಲ್ಲಿ ಅತೀ ಹೆಚ್ಚಿನ ಸದಸ್ಯತ್ವ ಮತ್ತು ಮೊತ್ತವನ್ನು ಸಂಗ್ರಹಿಸಿದಕ್ಕೆ ಜಗನ್ನಾಥ್ ಟಿ. ಶೆಟ್ಟಿಗಾರ್ ಅವರನ್ನು ಸಮ್ಮಾನಿಸಲಾಯಿತು. ಅತಿಥಿಯಾಗಿ ಆಗಮಿಸಿದ ವಿನೋದ್ ಶೆಟ್ಟಿಗಾರ್, ಪ್ರಕಾಶ್ ಶೆಟ್ಟಿಗಾರ್, ಶೆಟ್ಟಿಗಾರ್ ಹಾಗೂ ಕಲ್ಲಾಪು ವೀರಭದ್ರ ಮಹಾಮ್ಮಾಯಿ ದೇವಸ್ಥಾನದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಉಮಾನಾಥ್ ಶೆಟ್ಟಿಗಾರ್ ಹಾಗೂ ಪದಾಧಿಕಾರಿಗಳಾದ  ಶೆಟ್ಟಿಗಾರ್ ಮತ್ತು ಸುಂದರ್ ಟಿ. ಶೆಟ್ಟಿಗಾ‌ರ್ ಅವರನ್ನು ಗೌರವಿಸಲಾಯಿತು.

ಸಂಜೆ 7ಕ್ಕೆ ಅಶೋಕ್ ಕುಮಾರ್ ಕೊಡ್ಡಡ್ಕ ನಿರ್ದೇಶಿಸಿದ ಹಾಗೂ ಮನೋಹರ್ ಶೆಟ್ಟಿ ನಂದಳಿಕೆಯವರು ರಚಿಸಿದ ತುಳು ಹಾಸ್ಯ ನಾಟಕ ಮಕ್ಕರ್ ಮಲ್ಲಡೆ ಪ್ರದರ್ಶನಗೊಂಡಿತು. ರಾತ್ರಿ8.30ಕ್ಕೆ ಮಹಿಳಾ ಬಳಗ ಮತ್ತು ಯುವ ಸಮಿತಿಯವರಿಂದ ಮನೋರಂಜನೆ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು. ಪ್ರಕೃತಿಯವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಹರೀಶ್ ಪದ್ಮಶಾಲಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ – ಆರಂಭದಲ್ಲಿ ಎಲ್ಲರನ್ನು ಸ್ವಾಗತಿಸಿದ ಕಾರ್ಯಕ್ರಮ ಮುಕ್ತಾಯಗೊಂಡಿತು.

Related Articles

Back to top button
error: Content is protected !!