ಅಪಘಾತದಲ್ಲಿ ಮೃತಪಟ್ಟವರ ಮೈಮೇಲಿದ್ದ ಆಭರಣ ಕಳವು: ದೂರು ದಾಖಲು
Views: 2
ಕನ್ನಡ ಕರಾವಳಿ ಸುದ್ದಿ: ಕುಶಾಲನಗರ ಆನೆಕಾಡು ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರಲ್ಲಿ ರತನ್ ಅವರ ಮೈಮೇಲಿದ್ದ ಆಭರಣಗಳನ್ನು ಕಳವು ಮಾಡಿದ ಆರೋಪಿಗಳನ್ನು ಕೂಡಲೆ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ರತನ್ ಅವರನ್ನು ಕುಶಾಲನಗರದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಇ.ಸಿ.ಜಿ ಮಾಡುವಾಗ ಆಭರಣಗಳು ಇರುವುದನ್ನು ಮೃತಪಟ್ಟ ರತನ್ ಸ್ನೇಹಿತರು ಗಮನಿಸಿದ್ದು ಅನಂತರ ಆಭರಣಗಳನ್ನು ಅಲ್ಲೇ ತೆಗೆದಿರಿಸಿದ್ದಾರೋ ಅಥವಾ ಶವಾಗಾರದಲ್ಲಿ ನಾಪತ್ತೆಯಾಗಿವೆಯೋ ಎಂಬ ಅನುಮಾನಗಳು ಇರುವ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.
ಈ ಒಂದು ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಉಪಾಧ್ಯಕ್ಷರಾದ ಕೆ.ಆರ್.ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಗೋವಿಂದ್ ರಾಜ್ ದಾಸ್, ಕುಶಾಲನಗರದ ತಾಲ್ಲೂಕು ಘಟಕದ ಅಧ್ಯಕ್ಷರಾದ ಬಿ.ಜೆ.ಅಣ್ಣಯ್ಯ,ತಾಲ್ಲೂಕು ಉಪಾಧ್ಯಕ್ಷರಾದ ಎಸ್.ಎಸ್. ಫಯಾಜ್ ಉದ್ದೀನ್, ಮೃತಪಟ್ಟ ರತನ್ ಉಣ್ಣಿಯವರ ಸಂಬಂಧಿಕರುಗಳು, ಸ್ನೇಹಿತರಾದ ಪ್ರಶಾಂತ್ ವಿ.ಯೊಂದಿಗೆ ಇನ್ನು ಹಲವರು ಉಪಸ್ಥಿತರಿದ್ದರು.






