ಇತರೆ

ಲಾಡ್ಜ್ ನಲ್ಲಿ ಐಡಿ ಕಾರ್ಡ್ ಟ್ಯಾಗ್ನಿಂದ ಕತ್ತು ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಆತ್ಮಹತ್ಯೆ

Views: 46

ಕನ್ನಡ ಕರಾವಳಿ ಸುದ್ದಿ:  ಲಾಡ್ಜ್ ವೊಂದರಲ್ಲಿ ಪತ್ನಿಯನ್ನು ಐಡಿ ಕಾರ್ಡ್ ಟ್ಯಾಗ್ ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದ ಪತಿ ಕೂಡ ಇದೀಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

23 ವರ್ಷದ ವಿದ್ಯಾಳನ್ನು ಸೆ. 15 ರಂದು ದೊಡ್ಡಬಳ್ಳಾಪುರದ ಲಾಡ್ಜ್ ನಲ್ಲಿ ಐಡಿ ಕಾರ್ಡ್ ಟ್ಯಾಗ್ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದ ಆನಂದ್‌, ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದನು.

ಸೆಪ್ಟೆಂಬರ್ 16ರಂದು ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಬಳಿಕ ಪರಾರಿಯಾಗಿದ್ದ ಆನಂದ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಅವರ ಸ್ವಂತ ಊರಾದ ಗೌರಿಬಿದನೂರು ತಾಲ್ಲೂಕಿನ ಮುದಗೆರೆ ಗ್ರಾಮದ ಕೆರೆ ಬಳಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಶವ ಪತ್ತೆಯಾಗಿದೆ.

ಕೆರೆಯ ದಂಡೆಯ ಬಳಿ ತನ್ನ ಬೈಕ್ ನಿಲ್ಲಿಸಿದ್ದ ಆನಂದ್, ಮದ್ಯ ಸೇವಿಸಿ ಜಾಲಿ ಮರ ಹತ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಆನಂದ್ ಮೃತದೇಹ ಪತ್ತೆಯಾಗಿದೆ. ಮರದ ಬುಡದಲ್ಲಿ ಮದ್ಯದ ಬಾಟಲಿ ಹಾಗೂ ಸಿಗರೇಟ್ ಪ್ಯಾಕೆಟ್ ದೊರೆತಿದ್ದು, ಆನಂದ್‌ ಜೇಬಿನಲ್ಲಿ ಆತನ ಹಾಗೂ ಕೊಲೆಯಾದ ಪತ್ನಿ ವಿದ್ಯಾಳ ಮೊಬೈಲ್ ಫೋನ್ಗಳು ಸಿಕ್ಕಿವೆ. ಈ ಕುರಿತು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

Related Articles

Back to top button
error: Content is protected !!