ಇತರೆ
ನಿವೃತ್ತ ಪೋಸ್ಟ್ ಮಾಸ್ಟರ್ ವಕ್ವಾಡಿ ಪ್ರಭಾಕರ್ ಶೆಟ್ಟಿ ನಿಧನ
Views: 54
ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಅರೆಕಲ್ಲು ಮನೆ ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ಪ್ರಭಾಕರ್ ಶೆಟ್ಟಿ(86) ಸೆಪ್ಟೆಂಬರ್ 16ರಂದು ಅಪರಾಹ್ನ ಪತ್ನಿಯ ನಿವಾಸ ಹಕ್ಲಾಡಿಯಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಪ್ರಭಾಕರ್ ಶೆಟ್ಟಿ ಅವರು ಆರಂಭದಲ್ಲಿ ವಕ್ವಾಡಿ ಪೋಸ್ಟ್ ಆಫೀಸ್ ನಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ್ದು, ತದನಂತರ ಗಂಗೊಳ್ಳಿ, ಕುಂದಾಪುರ ಪ್ರಧಾನ ಅಂಚೆ ಕಚೇರಿ ಹಾಗೂ ಇನ್ನಿತರ ಕಡೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಹಲವಾರು ಕಡೆ ಸನ್ಮಾನ ಸ್ವೀಕರಿಸಿದ್ದರು.
ಮೃತರ ಅಂತ್ಯಸಂಸ್ಕಾರ ಸೆ.17ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ವಕ್ವಾಡಿ ಅರೆಕಲ್ಲುಮನೆ ನಿವಾಸದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.






