ಮೈದುನನೊಂದಿಗೆ ಅಕ್ರಮ ಸಂಬಂಧಕ್ಕಾಗಿ ಗಂಡನ ಜೀವ ತೆಗೆದ ಪತ್ನಿ!
Views: 56
ಕನ್ನಡ ಕರಾವಳಿ ಸುದ್ದಿ: ಪತಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳಬೇಕಿದ್ದ ಹೆಂಡತಿಯೇ, ಮೈದುನನ ಮೇಲಿನ ಕಾಮದಾಹಕ್ಕಾಗಿ ಹೆಣ್ಣು ಜನ್ಮಕ್ಕೆ ಮಸಿ ಬಳಿದು, ಅಡ್ಡಬಂದ ಪತಿಯನ್ನೇ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮೃತು ಕರೀಂ ಎಂಬುವವರ ಪತ್ನಿ ಸಲೀಮಾ ಬೇಗಂ ಹಾಗೂ ಅದೇ ಪ್ರದೇಶದ ನಿವಾಸಿ ಗೌಸ್ ಪಾಷಾ ಎಂಬಾತನ ನಡುವೆ ಅಕ್ರಮ ಸಂಬಂಧವಿತ್ತು. ಗೌಸ್ ಪಾಷಾ ಮೃತ ಕರೀಂಗೆ ಸಂಬಂಧದಲ್ಲಿ ಮೈದುನನಾಗುತ್ತಿದ್ದು, ಹಿಂದೆ ಕರೀಂ ನಡೆಸುತ್ತಿದ್ದ ಹೋಟೆಲ್‌ನಲ್ಲೇ ಕೆಲಸ ಮಾಡುತ್ತಿದ್ದನು. ಈ ನಂಟು ಅವರ ನಡುವೆ ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು. ಈ ವಿಷಯವಾಗಿ ಕರೀಂ ಹಾಗೂ ಸಲೀಮಾ ಬೇಗಂ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದು, ಹಿರಿಯರ ಸಮ್ಮುಖದಲ್ಲಿ ಪಂಚಾಯತ್ ಕೂಡ ಮಾಡಲಾಗಿತ್ತು. ಆದರೂ ತಮ್ಮ ನಡವಳಿಕೆ ಬದಲಾಯಿಸಿಕೊಳ್ಳದ ಇಬ್ಬರೂ, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನು ಹೇಗಾದರೂ ಮಾಡಿ ಮುಗಿಸಲು ಪಕ್ಕಾ ಪ್ಲಾನ್ ಮಾಡಿಕೊಂಡರು.
ನೆಲ್ಲೂರು ದರ್ಗಾಕ್ಕೆ ತೆರಳಿದ ಬಳಿಕ ಕರೀಂ ಅವರನ್ನು ಹತ್ಯೆ ಮಾಡುವಂತೆ ಸಲೀಮಾ ಬೇಗಂ ಈ ತಿಂಗಳ 9ರಂದು ವಾಟ್ಸಾಪ್ ಕಾಲ್ ಮೂಲಕ ತನ್ನ ಪ್ರಿಯಕರ ಗೌಸ್ ಪಾಷಾಗೆ ಆದೇಶ ನೀಡಿದ್ದಳು. ಯೋಜನೆಯಂತೆ ಈ ತಿಂಗಳ 10ರ ಮಧ್ಯರಾತ್ರಿ ನೇರವಾಗಿ ಕರೀಂ ಮನೆಗೆ ನುಗ್ಗಿದ ಗೌಸ್ ಪಾಷಾ, ಗಾಢ ನಿದ್ರೆಯಲ್ಲಿದ್ದ ಕರೀಂ ಮೇಲೆ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಈ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕರೀಂ ಪತ್ನಿ ಸಲೀಮಾ ಬೇಗಂ ಹಾಗೂ ಗೌಸ್ ಪಾಷಾ ಅವರನ್ನು ಬಂಧಿಸಿರುವ ಪೊಲೀಸರು, ಪ್ರಕರಣವನ್ನು ಅತ್ಯಂತ ಯಶಸ್ವಿಯಾಗಿ ಭೇದಿಸಿದ್ದಾರೆ. ಅಕ್ರಮ ಸಂಬಂಧಕ್ಕಾಗಿ ಗಂಡನ ಜೀವ ತೆಗೆದ ಈ ಕರಾಳ ಕೃತ್ಯವು ಭಾರೀ ಸಂಚಲನ ಸೃಷ್ಟಿಸಿದೆ.






