ಇತರೆ

ಕುಂದಾಪುರ: ದೇವಸ್ಥಾನದ ಹುಂಡಿ, ಮನೆ ಕಳ್ಳತನ ನಡೆಸಿ ಬೈಕ್ ನಿಲ್ಲಿಸಿ ಪರಾರಿಯಾದ ಕಳ್ಳರ ಬಂದನ

Views: 113

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಕುಂದಾಪುರದ ಮಚ್ಚಟ್ಟು ಗ್ರಾಮದಲ್ಲಿ ಮನೆ ಕಳವು ಮತ್ತು ಕುಳ್ಳುಂಜೆ ಗ್ರಾಮದಲ್ಲಿ ದೇವಸ್ಥಾನದ ಕಾಣಿಕೆ ಹುಂಡಿ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿ, ಕಳವಾದ ಹಣ ವಶಪಡಿಸಿಕೊಂಡಿದ್ದಾರೆ.

ಸೆ.4ರಂದು ಕುಳ್ಳುಂಜೆ ಗ್ರಾಮದ ಮುಂಡುಕೋಡು ಶ್ರೀ ಜಲದುರ್ಗಾ ಪರಮೇಶ್ವರಿ ದೇವಸ್ಥಾನದ ಕಾಣಿಕೆ ಹುಂಡಿ ಒಡೆದು ರೂ. 35,000 ದಿಂದ 40,000 ಹಣ ಕಳವು ಮತ್ತು ಮಚ್ಚಟ್ಟು ಗ್ರಾಮದ ಜಾಂಬೂರು ಜೆಡ್ಡು, ನೆಲ್ಲಿಗದ್ದೆ ಎಂಬಲ್ಲಿ ಮನೆಯವರು ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆಯ ಎದುರಿನ ಬಾಗಿಲ ಬೀಗ ಮುರಿದು ರೂ. 97,000 ನಗದು ಕಳವು ಮಾಡಲಾಗಿತ್ತು.ಈ ಬಗ್ಗೆ ಅಮಾಸೆಬೈಲು ಠಾಣೆ ಅಪರಾಧ ಕ್ರಮಾಂಕ ಪ್ರಕರಣ ದಾಖಲಾಗಿತ್ತು.

ಬಂಧಿತ ಆರೋಪಿಗಳು ರಾಕೇಶ್ ಹೆಚ್ (28) ತಂದೆ ಹನುಮಂತಪ್ಪ, ವಾಸ: ಎತ್ತಿನಹಳ್ಳಿ ಪುಣೆದಹಳ್ಳಿ ಗ್ರಾಮ, ಸಂಡಾ ಅಂಚೆ, ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ.ನಂದೀಶ್ ಎಂ (24) ತಂದೆ ಮಲ್ಲೇಶಪ್ಪ, ವಾಸ: ಕಾಲೇಕೆರೆ, ಜಕ್ಕೆನಹಳ್ಳಿ ಗ್ರಾಮ, ಸಂಡಾ ಅಂಚೆ, ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ ಎಂದು ಗುರುತಿಸಲಾಗಿದೆ.

ಆರೋಪಿಗಳನ್ನು ಹುಲಿಕಲ್ ಘಾಟ್ ಸಮೀಪ ದಸ್ತಗಿರಿ ಮಾಡಿ, ಕಳವು ಮಾಡಿದ್ದ ರೂ. 1,19,720 ನಗದು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಮಾರ್ಗದರ್ಶನದಲ್ಲಿ, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ, ಅಮಾಸೆಬೈಲು ಠಾಣೆ PSI ಭೀಮಾಶಂಕರ್ ಸಿನ್ನೂರ್, ಶಂಕರನಾರಾಯಣ ಠಾಣೆ PSI ಯೂನಸ್ ಗಡ್ಕೆಕರ್, ಅಮಾಸೆಬೈಲು ಠಾಣೆ PSI (ತನಿಖೆ) ಸುಧಾರಾಣಿ ಟಿ. ಹಾಗೂ ಸಿಬ್ಬಂದಿಗಳಾದ ಚಂದ್ರಶೇಖರ ಶೆಟ್ಟಿ ASI, ರಾಘವೇಂದ್ರ, ನವೀನ್ ಕುಮಾರ್, ಸುಧಾಕರ, ದಿನೇಶ, ಸಚಿನ್ ಕುಲಾಲ್, ಮಂಜುನಾಥ, ಜಯರಾಮ ನಾಯ್ಕ, ಚೇತನ್ ಕುಮಾರ್ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

Related Articles

Back to top button
error: Content is protected !!