ಇತರೆ

ಮದುವೆಯ ನಂತರ ಹಿಂದಿನ ಪ್ರಿಯಕರನೊಂದಿಗೆ ನಿರಂತರ ಸಂಪರ್ಕ: ಪತ್ನಿಯ ನಿರ್ಧಾರಕ್ಕೆ ಮದುವೆ ಮಾಡಿಸಿದ ಪತಿ

Views: 102

ಕನ್ನಡ ಕರಾವಳಿ ಸುದ್ದಿ: ಹಿಂದಿನ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪತಿಯ ಅಪರೂಪದ ನಿರ್ಧಾರವೊಂದು ಉತ್ತರ ಪ್ರದೇಶದ ಲಕ್ಕೋದಲ್ಲಿ ನಡೆದಿದೆ.

ಕುಟುಂಬಸ್ಥರ ಸಮ್ಮುಖದಲ್ಲಿ ಮಾತುಕತೆ ನಡೆಸಿದಾಗ, ಮಹಿಳೆ ತನ್ನ ಪತಿಯೊಂದಿಗೆ ಮತ್ತೆ ಜೀವನ ನಡೆಸಲು ತಾನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬದಲಾಗಿ, ತನ್ನ ಹಿಂದಿನ ಪ್ರಿಯಕರನೊಂದಿಗೆ ಜೀವನ ಸಾಗಿಸಲು ಬಯಸುವುದಾಗಿ ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಮಹಿಳೆ ಮತ್ತು ಆಕೆಯ ಹಿಂದಿನ ಪ್ರಿಯಕರ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಮಹಿಳೆಯ ವಿವಾಹಕ್ಕೂ ಮುನ್ನವೇ ಇಬ್ಬರ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ಆದರೆ ಕುಟುಂಬದ ಒತ್ತಡದ ಹಿನ್ನೆಲೆಯಲ್ಲಿ ಆಕೆ ಪಿಆರ್‌ಡಿ ಜವಾನನನ್ನು ವಿವಾಹವಾಗಿದ್ದರು. ಮದುವೆಯ ಬಳಿಕವೂ ತನ್ನ ಹಿಂದಿನ ಪ್ರಿಯಕರನೊಂದಿಗೆ ಸಂಪರ್ಕದಲ್ಲಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪತ್ನಿಯ ನಿರ್ಧಾರವನ್ನು ತಿಳಿದ ಪತಿ. ಆಕೆಯನ್ನು ತನ್ನೊಂದಿಗೆ ಇರಲು ಒತ್ತಾಯಿಸದಿರಲು ನಿರ್ಧರಿಸಿದ್ದಾರೆ. ಆಕೆ ಬಯಸಿದಂತೆ ಆಕೆಯ ಹಿಂದಿನ ಪ್ರಿಯಕರನೊಂದಿಗೆ ಮದುವೆಯಾಗಲು ಸಹಕರಿಸಿದ್ದಾರೆ.

ಬಳಿಕ ಎರಡೂ ಕುಟುಂಬಗಳ ಸಮ್ಮತಿ ಹಾಗೂ ಅಗತ್ಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿ, ಸ್ಥಳೀಯ ದೇವಾಲಯವೊಂದರಲ್ಲಿ ಮಹಿಳೆ ಮತ್ತು ಆಕೆಯ ಹಿಂದಿನ ಪ್ರಿಯಕರ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಇಬ್ಬರೂ ಪರಸ್ಪರ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

 

Related Articles

Back to top button
error: Content is protected !!