ಇತರೆ

ಪ್ರಿಯಕರನೊದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕಿ!

Views: 63

ಕನ್ನಡ ಕರಾವಳಿ ಸುದ್ದಿ: ಕೌಟುಂಬಿಕ ಕಲಹ ಹಾಗೂ ವಿವಾದಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಸುಮಾರು 8 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಶಿಕ್ಷಕಿ ರಾಧಾ ಶರ್ಮಾ (31) ಮತ್ತು ವಿಕ್ರಮ್ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಿದೆ.

ಪತ್ನಿ ರಾಧಾ ಶರ್ಮಾ ಅವರು ತನಗಿಂತ ವಯಸ್ಸಿನಲ್ಲಿ ಸಣ್ಣವರಾದ ದರ್ಶನ್ ನಾಯಕ್ (24) ಎಂಬ ಯುವಕರೊಂದಿಗೆ ಅನಧಿಕೃತ ಸಂಬಂಧ ಹೊಂದಿದ್ದಾರೆಂದು ಪತಿ ವಿಕ್ರಮ್ ಆರೋಪಿಸಿದ್ದಾರೆ. ವಿಕ್ರಮ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ದರ್ಶನ್ ಮನೆಗೆ ಬರುತ್ತಿದ್ದರು ಎಂಬುದು ಆರೋಪವಾಗಿದೆ.

ಈ ದಂಪತಿಗಳ ನಡುವಿನ ವೈಮನಸ್ಸು ಈಗಾಗಲೇ ಕೋರ್ಟ್ ಹಾಗೂ ಪೊಲೀಸ್ ಠಾಣೆವರೆಗೂ ತಲುಪಿದೆ. ವಿಕ್ರಮ್ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಹಾಗೂ ಮಾನಸಿಕ ಕಿರುಕುಳದ ಆರೋಪದಡಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ಮತ್ತೊಂದೆಡೆ, ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ಮಗುವನ್ನು ತಮಗೆ ಒಪ್ಪಿಸುವಂತೆ ಪತಿ ಕೋರ್ಟ್‌ನಲ್ಲಿ ಕೋರಿದ್ದರು.

ಕೋರ್ಟ್‌ನಲ್ಲಿ ಅಕ್ರಮ ಸಂಬಂಧಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಒದಗಿಸುವ ಹಿನ್ನೆಲೆಯಲ್ಲಿ ಹಾಗೂ ಕೆಲವು ಸಂಘಟನೆಗಳ ಸಹಕಾರದೊಂದಿಗೆ ಪತಿ ವಿಕ್ರಮ್ ಅವರು ಸ್ಥಳೀಯ ಪೊಲೀಸರೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ಜೋಡಿ ಸಿಕ್ಕಿಬಿದ್ದಿದೆ ಎಂದು ವರದಿಯಾಗಿದೆ.

ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಉಭಯ ಪಕ್ಷಕಾರರ ವಾದಗಳನ್ನು ಆಲಿಸಿ ತನಿಖೆ ಮುಂದುವರೆಸಿದ್ದಾರೆ.

 

Related Articles

Back to top button
error: Content is protected !!